ಹುಬ್ಬಳ್ಳಿ: ಅಧಿಕ ಲಾಭಾಂಶ ನೀಡುವುದಾಗಿ ಆನ್ಲೈನ್ ಲಿಂಕ್ ಮೂಲಕ ಆಮಿಷವೊಡ್ಡಿದ ಅಪರಿಚಿತರನ್ನು ನಂಬಿದ ಗೃಹಿಣಿಯೊಬ್ಬರು ಹಂತಹಂತವಾಗಿ ಒಟ್ಟು ₹17,45,500 ಹಣ ವರ್ಗಾವಣೆ ಮಾಡಿ ವಂಚನೆಗೆ ಒಳಗಾದ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದಾಖಲಾಗಿದೆ.

ಹುಬ್ಬಳ್ಳಿಯ ಗೋಪನಕೊಪ್ಪ ಮಹಾಲಕ್ಷ್ಮೀ ಬಡಾವಣೆ ನಿವಾಸಿ ಸಾಯವ್ವ ಬಳ್ಳಾರಿ ವಂಚನೆಗೊಳಗಾದ ಗೃಹಿಣಿ.

ಅಧಿಕ ಲಾಭ ನೀಡುವ ಸಂದೇಶದ ವಿಡಿಯೊ ತುಣುಕನ್ನು ಯುಟ್ಯೂಬ್ನಲ್ಲಿ ನೋಡಿ, ಅದರ ಲಿಂಕ್ ಕ್ಲಿಕ್ ಮಾಡಿದ್ದರು. ಆನಂತರ, ವ್ಯಾಟ್ಸ್ಆ್ಯಪ್ ಲಿಂಕ್ನಲ್ಲಿ ಇಂಗ್ಲಿಷ್ ಸಂದೇಶ ಬಂದಿದ್ದರಿಂದ ಓದಲಾಗದೆ ಕೈಬಿಟ್ಟಿದ್ದರು. ಆನಂತರ ಪುತ್ರನ ನೆರವಿನಿಂದ ಓದಿಸಿ ತಿಳಿದುಕೊಂಡು ‘ವಿಎಲ್ಎಸ್ಎನ್ಎಚ್ಡಬ್ಲು’ ಎನ್ನುವ ಮೊಬೈಲ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡಿದ್ದಾರೆ.

ವಂಚಕರು ನೀಡಿದ ಸೂಚನೆ ಅನುಸರಿಸಿ ಒಂದು ತಿಂಗಳಲ್ಲಿ ಹಂತಹಂತವಾಗಿ ಸಾಯವ್ವ ಅವರು ಹಣ ವರ್ಗಾವಣೆ ಮಾಡಿದ್ದಾರೆ. ಫೆ. 5ರಂದು ಹಣ ಹಿಂತೆಗೆದುಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಆಗ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದ್ದು, ದೂರು ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.