ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ದೇವರ ಫೋಟೊಗಳನ್ನು ವಿಲೇವಾರಿ ಮಾಡಿದ ಯುವ ಬ್ರಿಗೇಡ್‌

Published 11 ಡಿಸೆಂಬರ್ 2023, 14:25 IST
Last Updated 11 ಡಿಸೆಂಬರ್ 2023, 14:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ರಸ್ತೆಬದಿಗಳಲ್ಲಿ, ಮರಗಿಡಗಳ ಬುಡದಲ್ಲಿದ್ದ ದೇವರ ಫೋಟೊಗಳನ್ನು ಯುವ ಬ್ರಿಗೇಡ್‌ ಕಾರ್ಯಕರ್ತರು ಸಂಗ್ರಹಿಸಿ, ಗಾಜು, ಫ್ರೇಮ್‌ ಹಾಗೂ ಫೋಟೊಗಳನ್ನು ಬೇರ್ಪಡಿಸಿ ವಿಲೇವಾರಿ ಮಾಡಿದ್ದಾರೆ.

ಗೋಕುಲರಸ್ತೆಯ ರವಿನಗರದ ಗಣಪತಿ ದೇವಸ್ಥಾನದ ಪಕ್ಕದ ಸಂತೆ ಮೈದಾನದಲ್ಲಿ ಒಂದೆಡೆ ಸೇರಿದ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು, 800ಕ್ಕೂ ಹೆಚ್ಚು ಫೋಟೊಗಳನ್ನು ವಿಲೇವಾರಿ ಮಾಡಿದರು. ಈ ಕಾರ್ಯಕ್ಕೆ ‘ಕಣಕಣದಲ್ಲೂ ಶಿವ’ ಎಂದು ಹೆಸರಿಟ್ಟು, ಫೋಟೊಗಳ ಬಿಡಿ ಭಾಗಗಳನ್ನು ಬೇರ್ಪಡಿಸಿದರು. ಫ್ರೇಮ್‌ಗಳನ್ನು ಫೋಟೊ ಅಂಗಡಿಯವರಿಗೆ ನೀಡಿದರೆ, ಗಾಜುಗಳನ್ನು ವಿಲೇಮಾರಿ ಮಾಡಲು ಪಾಲಿಕೆಗೆ ನೀಡಿದ್ದಾರೆ. ಮೈದಾನದ ಉದ್ಯಾನದಲ್ಲಿ ತೆಗ್ಗು ತೋಡಿ, ದೇವರ ಚಿತ್ರಗಳ ಫೋಟೊಗಳನ್ನು ಇಟ್ಟು ಅದರ ಮೇಲೆ ಗಿಡಗಳನ್ನು ನೆಟ್ಟಿದ್ದಾರೆ. ಸುತ್ತಲಿನ ಸಾರ್ವಜನಿಕರು ಕೈ ಜೋಡಿಸಿದ್ದರು.

ಈ ಕುರಿತು ಮಾತನಾಡಿದ ಯುವ ಬ್ರಿಗೇಡ್‌ನ ಸದಸ್ಯ ಚಿದಂಬರ ಶಾಸ್ತ್ರಿ, ‘ಹೊಸಮನೆ ಕಟ್ಟುವಾಗ ಅಥವಾ ಹಾಳಾದ, ಬೇಡವಾದ ಫೋಟೊಗಳನ್ನು ಸಾರ್ವಜನಿಕರು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ರಸ್ತೆ ಬದಿಯಲ್ಲಿ, ಗಟಾರದಲ್ಲಿ, ಹೊಲಸು ಜಾಗದಲ್ಲಿ ಇಟ್ಟು ಹೋಗುತ್ತಾರೆ. ದೇವರೆಂಬ ನಂಬಿಕೆ ಮತ್ತು ಕಲ್ಪನೆಗೆ ಅದು ಘಾಸಿಯಾಗುತ್ತದೆ. ಗೋಕುಲ ರಸ್ತೆ, ಕೇಶ್ವಾಪುರ, ಸಂತೋಷನಗರ, ಉಣಕಲ್‌, ನವನಗರ ಹೀಗೆ ವಿವಿಧ ಸ್ಥಳಗಳಿಂದ 800ಕ್ಕೂ ಹೆಚ್ಚು ಫೋಟೊಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT