ಶುಕ್ರವಾರ, ಜೂಲೈ 10, 2020
21 °C

ಮಾರುಕಟ್ಟೆಗೆ ಲಗ್ಗೆ ಇಟ್ಟ ಹುಂಡೈ ವೆನ್ಯೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಭಾರತದಲ್ಲಿ ತಯಾರಾದ ಮೊದಲ ಎಸ್‌ಯುವಿ ‘ಹುಂಡೈ ವೆನ್ಯೂ’ ಕಾರು ಮಂಗಳವಾರ ವಾಣಿಜ್ಯ ನಗರಿಯಲ್ಲಿಯೂ ಬಿಡುಗಡೆಯಾಯಿತು.

ಭೈರಿದೇವರಕೊಪ್ಪದಲ್ಲಿರುವ ಬೆಲ್ಲದ ಶೋ ರೋಮ್‌ನಲ್ಲಿ ಬಿಡುಗಡೆ ನಡೆಯಿತು. ಮೊಬೈಲ್‌ ಮೂಲಕವೇ ಕಾರಿನ ಎಲ್ಲ ಸವಲತ್ತುಗಳನ್ನು ಬಳಸಿಕೊಳ್ಳಲು ಅವಕಾಶವಿದೆ. ಎಸ್‌ಯುವಿ ಸಂಪರ್ಕ ಹೊಂದಿದ ಭಾರತದ ಮೊದಲ ಕಾರು ಎನ್ನುವ ಹೆಗ್ಗಳಿಗೆ ಹೊಂದಿದೆ.

ಸಂಸದ ಪ್ರಹ್ಲಾದ ಜೋಶಿ, ಬ್ಯಾಂಕ್‌ ಆಫ್‌ ಬರೋಡಾದ ವಿಭಾಗೀಯ ಮ್ಯಾನೇಜರ್ ಶ್ರೀನಿವಾಸ ರವಿಪತಿ, ಬೆಲ್ಲದ ಕಂಪನಿಯ ಆಡಳಿತ ಮಂಡಳಿ ನಿರ್ದೇಶಕ ಹಾಗೂ ಶಾಸಕ ಅರವಿಂದ ಬೆಲ್ಲದ ಕಾರು ಅನಾವರಣ ಮಾಡಿದರು.

‘ಮೊಬೈಲ್‌ನಿಂದಲೇ ಕಾರು ಆಫ್‌ ಮತ್ತು ಆನ್‌ ಮಾಡುವುದು. ಎಸಿ ನಿರ್ವಹಣೆ, ಕಚೇರಿಯಲ್ಲಿ ಕುಳಿತೇ ಸ್ನೇಹಿತರಿಗೆ ಕಾರಿನ ಕೀ ಕೊಡುವ ಸೌಲಭ್ಯವಿದೆ. ಕಾರು ಕಳ್ಳತನವಾದರೆ ಟ್ರ್ಯಾಕ್‌ ಮಾಡಲು ಅವಕಾಶವಿದೆ’ ಎಂದು ಬೆಲ್ಲದ ಶೋ ರೂಮ್‌ನ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ವೈಚಾಳ ತಿಳಿಸಿದರು.

‘ಹುಂಡೈ ವೆನ್ಯೂನಲ್ಲಿ ಒಂದು ಲೀಟರ್‌ನ ಟರ್ಬೊ ಎಂಜಿನ್‌, 1.2 ಲೀಟರ್‌ನ ಪೆಟ್ರೋಲ್‌ ಎಂಜಿನ್ ಮತ್ತು 1.4 ಲೀಟರ್‌ನ ಡೀಸೆಲ್‌ ಎಂಜಿನ್‌ ಇರುತ್ತದೆ. ಹೆಚ್ಚು ಸುರಕ್ಷತಾ ಸೌಲಭ್ಯವಿದೆ. ಹುಬ್ಬಳ್ಳಿಯ ನವೀನ ಜಾರಟಗಿ ಮೊದಲ ಕಾರು ಖರೀದಿಸಿದ್ದಾರೆ. 40 ಜನ ಈಗಾಗಲೇ ಕಾರು ಖರೀದಿಸಲು ಹೆಸರು ನೋಂದಾಯಿಸಿದ್ದಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು