ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹುಬ್ಬಳ್ಳಿ: ರೈಲ್ವೆ ಹಳಿಗೆ ಸಿಲುಕಿ ಹೆಚ್ಚಿದ ಸಾವು–ನೋವು

ಕಳೆದ ಮೂರು ವರ್ಷಗಳಲ್ಲಿ 360ಕ್ಕೂ ಹೆಚ್ಚು ಜನ ಸಾವು: ಆತ್ಮಹತ್ಯೆ ಪ್ರಕರಣಗಳೇ ಹೆಚ್ಚು
Published : 10 ಫೆಬ್ರುವರಿ 2025, 5:04 IST
Last Updated : 10 ಫೆಬ್ರುವರಿ 2025, 5:04 IST
ಫಾಲೋ ಮಾಡಿ
Comments
ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳಲು ರೈಲು ಬರುತ್ತಿರುವ ವೇಳೆಯೇ ಜನರು ರೈಲು ಹಳಿ ದಾಟಿದರು
ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳಲು ರೈಲು ಬರುತ್ತಿರುವ ವೇಳೆಯೇ ಜನರು ರೈಲು ಹಳಿ ದಾಟಿದರು
ರೈಲ್ವೆ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ ಪೊಲೀಸರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಪ್ರಯಾಣಿಕರು ಜಾಗೃತಿವಹಿಸಬೇಕು. ನಿಯಮ ಉಲ್ಲಂಘಿಸುವವರಿಗೆ ತಿಳಿಹೇಳಬೇಕು
ರೈಲ್ವೆ ಪೊಲೀಸ್ ಅಧಿಕಾರಿ ಹುಬ್ಬಳ್ಳಿ ವಿಭಾಗ
ರೈಲು ಹಳಿಯಲ್ಲಿ ಓಡಾಡದಂತೆ ರೈಲ್ವೆ ಇಲಾಖೆಯಿಂದ ವರ್ಷವಿಡೀ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತದೆ. ಆದರೂ ನಿಯಮಗಳನ್ನು ಉಲ್ಲಂಘಿಸಿ ರೈಲು ಹಾಯ್ದು ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ
ಮಂಜುನಾಥ ಕನಮಡಿ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
ಶವದ ಗುರುತು ಪತ್ತೆ ಹಚ್ಚುವುದೇ ಕಷ್ಟ
‘ರೈಲ್ವೆ ಹಳಿಗೆ ಸಿಲುಕಿ ಮೃತಪಟ್ಟವರ ದೇಹ ಛಿದ್ರವಾಗಿರುತ್ತದೆ. ಕೆಲವರ ಗುರುತು ಕೂಡ ಸಿಗುವುದಿಲ್ಲ. ಮೃತರ ಗುರುತು ಪತ್ತೆ ಹಚ್ಚುವುದೇ ಬಹುದೊಡ್ಡ ಸವಾಲಾಗುತ್ತದೆ. ಮುಖ ದೇಹದ ಮೇಲಿನ ಗುರುತು ಮೊಬೈಲ್ ಬ್ಯಾಗ್‌ನಲ್ಲಿ ಸಿಕ್ಕ ವಸ್ತುಗಳನ್ನು ನೋಡಿ ಗುರುತು ಪತ್ತೆ ಹಚ್ಚಿ ಕುಟುಂಬಸ್ಥರನ್ನು ಸಂಪರ್ಕಿಸಿ ಶವ ಹಸ್ತಾಂತರಿಸಲಾಗುತ್ತದೆ. ಗುರುತು ಸಿಗದ ಶವಗಳನ್ನು ಕೆಲವು ದಿನ ಇಟ್ಟುಕೊಂಡು ಕೊನೆಗೆ ವಾರಸುದಾರರು ಸಿಗದಿದ್ದಾಗ ರೈಲ್ವೆ ಇಲಾಖೆಯಿಂದಲೇ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ’ ಎನ್ನುತ್ತಾರೆ ರೈಲ್ವೆ ಪೊಲೀಸರು.
‘ರೈಲ್ವೆ ಇಲಾಖೆಯಿಂದ ಸುರಕ್ಷತೆಗೆ ಆದ್ಯತೆ’
‘ರೈಲು ಹಳಿಗೆ ಸಿಲುಕಿ ಸಂಭವಿಸುವ ಸಾವು–ನೋವುಗಳಿಗಳಿಗೆ ಪ್ರಯಾಣಿಕರ ನಿರ್ಲಕ್ಷ್ಯವೇ ಕಾರಣವಾಗಿದೆ. ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಇಲಾಖೆ ಹೆಚ್ಚಿನ ಆದ್ಯತೆ ನೀಡಿದೆ. ಸುರಕ್ಷತೆಯ ಕುರಿತು ಜಾಗೃತಿಯನ್ನೂ ಮೂಡಿಸಲಾಗುತ್ತದೆ. ಪ್ರಯಾಣಿಕರು ಒಂದು ಫ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಫ್ಲಾಟ್‌ಫಾರ್ಮ್‌ಗೆ ಹೋಗಲು ರೈಲಿನಿಂದ ಇಳಿದು ಹೊರಹೋಗಲು ಅಂಡರ್‌ಪಾಸ್‌ ಸ್ಕೈವಾಕ್ ಎಸ್ಕ್‌ಲೇಟರ್ ವ್ಯವಸ್ಥೆ ಕಲ್ಪಿಸಿದೆ. ಆದರೂ ಕೆಲವರು ನಿಯಮ ಮೀರಿ ರೈಲು ಹಳಿಯಲ್ಲಿಯೇ ಸಾಗುತ್ತಾರೆ. ಈ ವೇಳೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಾರೆ’ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದರು.
ಮುನ್ನೆಚ್ಚರಿಕೆ ಕ್ರಮಗಳು
ರೈಲು ಸಂಚರಿಸುವಾಗ ಹಳಿಯ ಪಕ್ಕ ನಿಲ್ಲಬಾರದು ಕಿವಿಯಲ್ಲಿ ಇಯರ್ ಫೋನ್ ಹಾಕಿಕೊಂಡು ಹಳಿಯಲ್ಲಿ ಸಂಚರಿಸಬಾರದು ರೈಲು ಹಳಿಯಲ್ಲಿ ನಿಂತುಕೊಂಡು ಮೊಬೈಲ್‌ನಲ್ಲಿ ಮಾತನಾಡಬಾರದು ರೈಲು ಬರುವಾಗ ಹಳಿಯಲ್ಲಿ ನಿಂತು ಫೋಟೊ ತೆಗೆದುಕೊಳ್ಳುವುದು ಬೇಡ ಕ್ರಾಸಿಂಗ್ ಸಮಯದಲ್ಲಿ ರೈಲ್ವೆ ಹಳಿ ದಾಟಬಾರದು ರೈಲು ಹಳಿಯಲ್ಲಿ ಕುಳಿತುಕೊಳ್ಳುವುದು ಮಲಗುವುದು ಮಾಡಬಾರದು ರೈಲು ನಿಲ್ದಾಣದಲ್ಲಿ ಫ್ಲಾಟ್‌ಫಾರ್ಮ್‌ಗೆ ತೆರಳಲು ಹಳಿ ದಾಟಿ ಹೋಗದೆ ಕೆಳಸೇತುವೆ ಫ್ಲೈಓವರ್ ಬಳಸಬೇಕು ಚಲಿಸುವಾಗ ರೈಲು ಹತ್ತುವುದು ನಿಲ್ಲುವ ಮುನ್ನವೇ ಇಳಿಯುವುದು ಮಾಡಬಾರದು ಚಲಿಸುವ ರೈಲಿನ ಬಾಗಿಲಿನಲ್ಲಿ ನಿಲ್ಲಬಾರದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT