ಮಂಗಳವಾರ, ಸೆಪ್ಟೆಂಬರ್ 21, 2021
22 °C

ಹುಬ್ಬಳ್ಳಿಯಲ್ಲಿ ಸ್ವಾತಂತ್ರ್ಯ ದಿನದ ಸಡಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ವಿವಿಧೆಡೆ ಭಾನುವಾರ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ಎಪಿಎಂಸಿ: ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪೂರ ಧ್ವಜಾರೋಹಣ ಮಾಡಿದರು. ಸಂಘದ ಉಪಾಧ್ಯಕ್ಷ ಶಂಕರ ನೇಗಿನಹಾಳ, ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಬ. ಅಂಕಲಕೋಟಿ, ಮಾಜಿ ಅಧ್ಯಕ್ಷ ರಾಜಣ್ಣ ಬತ್ಲಿ, ರಾಜಶೇಖರ ವಾಲಿ, ಗಂಗನಗೌಡ ಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಹುಡಾ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಕಚೇರಿಯಲ್ಲಿ ಅಧ್ಯಕ್ಷ ನಾಗೇಶ ಕಲಬುರ್ಗಿ ಧ್ವಜಾರೋಹಣ ನೆರವೇರಿಸಿದರು. ಹುಡಾ ಆಯುಕ್ತ ಎಚ್. ಕುಮ್ಮಣ್ಣನವರ, ಅಧಿಕಾರಿಗಳಾದ ವಿವೇಕ ಕಾರೇಕರ. ಜಯಶ್ರೀ ಶಿಂತ್ರಿ, ಎಂ ರಾಜಶೇಖರ. ರಾಜೇಂದ್ರ ಕೊಕ್ಕಳಕಿ. ಎಚ್ ಪ್ರಾಣೇಶ. ಅಕ್ಷತಾ ಇಮಗೌಡನವರ, ಸುರೇಶ ಬೊಳಣ್ಣವರ, ಬಸವರಾಜ ದೇವಗಿರಿ, ಮುಕುಂದ ಜೋಶಿ, ಮೌನೇಶ ಬಡಿಗೇರ, ಆರ್.ಜಿ. ಪಾಟೀಲ ಇದ್ದರು.

ಚಿನ್ಮಯ ಕಾಲೇಜು: ಚಿನ್ಮಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯ ವಿನಾಯಕ ಬಿ.ಕೆ. ಧ್ವಜಾರೋಹಣ ನೆರವೇರಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಗಿರೀಶ ಉಪಾಧ್ಯಾಯ ಸೇರಿದಂತೆ ಇತರರು ಇದ್ದರು.

ಪ್ರೇರಣಾ ಕಾಲೇಜು: ‌ಕೆ.ಎಲ್.ಇ ಸಂಸ್ಥೆಯ ಪ್ರೇರಣಾ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯ ಪ್ರೊ. ಶಿವಾನಂದ ಬಬಲೇಶ್ವರ ಧ್ವಜಾರೋಹಣ ಮಾಡಿದರು. ಉಪನ್ಯಾಸಕಿಯರಾದ ಸರಸ್ವತಿ ಹೆಗಡೆ, ಶ್ವೇತಾ ಪುಜಾರ, ಗಿರೀಶ ಮಠದ ಸೇರಿದಂತೆ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ಮದರಸಾ ಶಾಲೆ: ಹಳೇ ಹುಬ್ಬಳ್ಳಿಯ ಖಾದ್ರಿಯಾ ಟೌನ್ ಹಾದಿ ಟ್ರಸ್ಟ ಅನಾಥಾಶ್ರಮ, ಅರಬಿಕ್ ಮದರಸಾ ಮತ್ತು ಅಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ಈಸರ್‌ ಡವಲಪರ್ಸ್ ಅಧ್ಯಕ್ಷ ರಯಿಸ ಖಾನ್ ಪಠಾಣ, ಹಾದಿ ಟ್ರಸ್ಟ್‌ ಅಧ್ಯಕ್ಷ ಮೌಲಾನಾ ಮುಹ್ಮದ್ ಜಾವಿದ ಮನ್ನಾನಿ, ಸದ್ಯಸರಾದ ಸೈಯದ್‌ ಅಹ್ಮದ ಮದನ, ಅಜರುದ್ದೀನ್‌ ಲಕ್ಕಡಹಾರೆ, ಆಸೀಫ್‌ ಉಸ್ತಾದ, ಜಾಕೀರ ಹುಸೇನ ಸರವರಿ, ಅಬ್ದುಲ್ ಮುನಾಫ ಫನಿಬಂದ, ಸಿಕಂದರ ಬಳ್ಳಾರಿ, ಮಖತುಮ ಸಾಗೇಬ್‌, ಸುಹೈಲ್ ಖಾನ್ ಪಠಾಣ, ಅಬ್ದುಲ್ ರಜಾಕ ಅಂಕಲಗಿ, ಅಲ್ತಾಫ್‌ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕೆಎಸ್‌ಎಸ್‌: ಹುಬ್ಬಳ್ಳಿ ಹೊರವಲಯದ ಕರ್ನಾಟಕ ಶಿಕ್ಷಣ ಸೇವಾ ಸಮಿತಿಯ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ಗೌರವ ಕಾರ್ಯದರ್ಶಿ ಡಾ. ಸತ್ಯಮೂರ್ತಿ ಆಚಾರ್ಯರು ಧ್ವಜಾರೋಹಣ ಮಾಡಿದರು. ಆರ್‌ಎಸ್‌ಎಸ್‌ ಸಂಚಾಲಕ ರಘುನಂದನ ಹಾಗೂ ಕಾಲೇಜಿನ ಸಿಬ್ಬಂದಿ ಇದ್ದರು.

ಶೂಟಿಂಗ್‌ ಅಕಾಡೆಮಿ: ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯಲ್ಲಿ ಮಾಜಿ ಯೋಧ ಬಸಪ್ಪ ಹರಕುಣಿ, ಮಂಜುನಾಥ ಗೋಕುಲ ಧ್ವಜಾರೋಹಣ ಮಾಡಿದರು.  ಅಕಾಡೆಮಿ ಸಂಸ್ಥಾಪಕ ಶಿವಾನಂದ ಬಾಲೇಹೊಸೂರ ಪಾಲ್ಗೊಂಡಿದ್ದರು. 

ಉರ್ದು ಶಾಲೆ: ಹುಬ್ಬಳ್ಳಿಯ ಅಂಜುಮನ್‌ ಎ ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಅಲ್ತಾಫ್‌ ನವಾಜ್‌ ಕಿತ್ತೂರ ಆಂಗ್ಲಿ ಉರ್ದು ಬಾಲಕಿಯರ ಪ್ರೌಢ ಶಾಲೆ ಮತ್ತು ಪದವಿ ಕಾಲೇಜಿನಲ್ಲಿ ಧ್ವಜಾರೋಹಣ ಮಾಡಿದರು. ಸಲೀಮ್‌ ಸುಂದ್ಕೆ, ದಾದಾಹಯಾತ್‌ ಹೊಂಗಲ್‌, ಸಲೀಮ್‌ ಹೆಬ್ಬಳ್ಳಿ, ಮೊಮಿನ್‌ ಹಾಗೂ ಸಿಬ್ಬಂದಿ ಇದ್ದರು.

ಯುವಕ ಮಂಡಲ: ಜೈ ಕರ್ನಾಟಕ ಯುವಕ ಮಂಡಲದ ವತಿಯಿಂದ ನವನಗರ ಕರ್ನಾಟಕ ವೃತ್ತದಲ್ಲಿ ಪೊಲೀಸ್‌  ಠಾಣಾಧಿಕಾರಿ ವಿಶ್ವನಾಥ ಚೌಗಲಾ ಧ್ವಜಾರೋಹಣ ಮಾಡಿದರು. ಸ್ವಾಮಿ ಮಹಾಜನಶೆಟ್ಟರ, ಭೀಮಣ್ಣ ಜಾವೂರ, ಸಂಗಮೇಶ, ಗುರು,ಸೊಗಿ ಮತ್ತು  ನಿಲೋಗಲ್ ಇದ್ದರು. 

ಸಾಖರೆ ಶಾಲೆ: ಕೆ.ಎಲ್.ಇ ಸಂಸ್ಥೆಯ ಎಂ.ಆರ್‌. ಸಾಕ್ರೆ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯಲ್ಲಿ ನಡೆದ ಧ್ವಜಾರೋಹಣದಲ್ಲಿ ಶಿಕ್ಷಕಿ ದೀಪಾ, ನೀಲಂ ವಾರದ, ರುಕ್ಮಿಣಿ, ಜ್ಯೋತಿ ಶೆಟ್ಟರ್ ಇದ್ದರು.

ರೇವಣಸಿದ್ದೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಧ್ವಜಾರೋಹಣದಲ್ಲಿ ಕುಮಾರಸ್ವಾಮಿ ಪತ್ರಯ್ಯ ಹಿರೇಮಠ, ಮಂಜುನಾಥ ಕೆ ಡಾಲಾಯತರ, ಅನಿಲ ಜಾಧವ, ಹನುಮಂತ ಉಪ್ಪಾರ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.