ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳು ಕಚ್ಚಾಡುವುದು ಸರಿಯಲ್ಲ; ಹೊರಟ್ಟಿ

Last Updated 18 ಜನವರಿ 2023, 5:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಶಾಸಕರು ಮತ್ತು ಸಚಿವರಾದವರು ತಮ್ಮ ಸ್ಥಾನಕ್ಕೆ ತಕ್ಕಂತೆ ಗೌರವಯುತವಾಗಿ ವರ್ತಿಸಬೇಕು. ಆಡಿಯೊ, ವಿಡಿಯೊ ಎನ್ನುತ್ತ ಕಚ್ಚಾಡುವುದು ಸರಿಯಲ್ಲ’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ತಿಪ್ಪಾರೆಡ್ಡಿ ಅವರದ್ದು ಎನ್ನಲಾದ ಆಡಿಯೊ ವಿಷಯ ಕುರಿತು ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಈ ವಿಚಾರ ನನಗೆ ಎಳ್ಳಷ್ಟು ಒಪ್ಪಿಗೆಯಾಗಿಲ್ಲ. ಇಂತಹ ವಿಷಯ ಸಾರ್ವಜನಿಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ವಿಚಾರ ಮಾಡಬೇಕು. ಜನಪ್ರತಿನಿಧಿಗಳು ಇನ್ನೊಬ್ಬರಿಗೆ ಮಾದರಿಯಾಗಿರಬೇಕು’ ಎಂದು ಹೇಳಿದರು.

‘ಶಾಸಕರು ಏನೋ ಹೇಳುತ್ತಾರೆ ಎಂದಾಗ, ಸಚಿವರಾದವರು ತಾಳ್ಮೆ ಕಳೆದುಕೊಳ್ಳಬಾರದು. ಸಿ.ಡಿ, ಆಡಿಯೊ ಮಾಡುತ್ತೇನೆ ಎಂದರೆ ಏನರ್ಥ? ಎಲ್ಲ ಸರ್ಕಾರದಲ್ಲೂ ಸಿ.ಡಿ ರಾಜಕಾರಣಗಳಿದ್ದವು. ರಾಜಕಾರಣದಲ್ಲಿ ಶಿಸ್ತು ಇಲ್ಲವೆಂದಾದರೆ ಹೀಗಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ನಮ್ಮ ಭಾಗದವರೇ ಆಗಿರುವುದರಿಂದ ಈ ಬಾರಿ ಮಂಡಿಸಲಿರುವ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಶೇ 60ರಷ್ಟು ಪಾಲು ದೊರೆಯುವ ನಿರೀಕ್ಷೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT