ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾ ಕಂಪನಿ ವಿರುದ್ಧ ಕೋನರಡ್ಡಿ ದೂರು

Last Updated 27 ನವೆಂಬರ್ 2021, 16:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಧಾರವಾಡ ಜಿಲ್ಲೆಯಲ್ಲಿ ಬೆಳೆವಿಮೆ ಗುತ್ತಿಗೆ ಪಡೆದ ಐಸಿಐಸಿಐ ಲೊಂಬಾರ್ಡ್‌ ಜನರಲ್‌ ಇನ್ಸೂರೆನ್ಸ್‌ ಕಂಪನಿ ರೈತರಿಗೆ ಪರಿಹಾರ ನೀಡದೆ ವಂಚಿಸಿದೆ’ ಎಂದು ಜೆಡಿಎಸ್‌ ಮುಖಂಡರ ಎನ್‌.ಎಚ್‌. ಕೋನರಡ್ಡಿ ಆರೋಪಿಸಿದ್ದಾರೆ.

ಶನಿವಾರ ಗೋಕುಲ ಪೊಲೀಸ್‌ ಠಾಣೆಯಲ್ಲಿ ವಿಮಾ ಕಂಪನಿ ವಿರುದ್ಧ ದೂರು ಸಲ್ಲಿಸಿ ಅವರು ಮಾತನಾಡಿದರು. ‘ಅತಿವೃಷ್ಟಿ, ನೈಸರ್ಗಿಕ ವಿಕೋಪ, ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯಾದರೆ ಅಥವಾ ಮಳೆಯಿಲ್ಲದೆ ಹಾನಿಯಾದರೆ ವಿಮಾ ಕಂಪನಿ ಪರಿಹಾರ ನೀಡಬೇಕು. ಆದರೆ, ಕಂಪನಿ ರೈತರಿಂದ ಹಣ ತುಂಬಿಸಿಕೊಂಡು 2018–2021ರವರೆಗೆ ಪರಿಹಾರ ನೀಡದೆ ವಂಚಿಸಿದೆ’ ಎಂದು ದೂರಿದರು.

‘ಸಮಸ್ಯೆ ಪರಿಹಾರಕ್ಕೆ ವಿಮಾ ಕಂಪನಿಯವರಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. 100 ಮಂದಿ ರೈತರು ಅರ್ಜಿ ಸಲ್ಲಿಸಿದರೆ, ಐದು ಮಂದಿಗೆ ಮಾತ್ರ ಪರಿಹಾರ ನೀಡುತ್ತಾರೆ. ಅರ್ಜಿ ಪಡೆದ ರೈತರಿಗೆ ಸ್ವೀಕೃತಿ ನೀಡುವುದಿಲ್ಲ. ಈ ಕುರಿತು ತನಿಖೆ ಕೈಗೊಂಡು ರೈತರಿಗೆ ನ್ಯಾಯ ನೀಡಬೇಕೆಂದು ದೂರು ನೀಡಲಾಗಿದೆ’ ಎಂದು ತಿಳಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಶಿವಣ್ಣ ಹುಬ್ಬಳ್ಳಿ, ಸಾದಿಕ್‌ ಹಕಿಂ, ಸಿದ್ದು ತೇಜಿ, ಚಂದ್ರಗೌಡ ಪಾಟೀಲ, ಮುತ್ತು ಕಾಲವಾಡ, ಮಹಾಂತೇಶ ಗಂಗಾಧರಮಠ, ಪರ್ವೇಜ್ ಕಟ್ಟಿಮನಿ, ಆನಂದ ಹಬೀಬ, ಎಸ್.ಜಿ. ಕೊಣ್ಣೂರ, ವೈ. ಎಂ. ಕಲಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT