ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿತೋ ಸಂಸ್ಥೆಯಿಂದ ವಾಲಿಬಾಲ್‌ ಟೂರ್ನಿ

Last Updated 21 ಮಾರ್ಚ್ 2022, 16:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜೈನ್‌ ಇಂಟರ್‌ನ್ಯಾಷನಲ್‌ ಟ್ರೇಡ್‌ ಆರ್ಗನೈಸೇಷನ್ ವತಿಯಿಂದ ಕುಸುಗಲ್‌ ರಸ್ತೆಯ ಸ್ಟೋರ್ಟ್ಸ್‌ ಪಾರ್ಕ್‌ನಲ್ಲಿ ಈಚೆಗೆ ಸಂಸ್ಥೆಯ 16ನೇ ಸಂಸ್ಥಾಪನಾ ದಿನವನ್ನು ಶ್ರವಣ ಮತ್ತು ವಾಕ್ ದೋಷವುಳ್ಳ ಮಕ್ಕಳೊಂದಿಗೆ ಆಚರಿಸಲಾಯಿತು.

ಜಿತೋ ಸಂಸ್ಥೆಯ ಉಪಾಧ್ಯಕ್ಷ ಅನಿಲ್‌ ಜೈನ್‌, ಪ್ರಧಾನ ಕಾರ್ಯದರ್ಶಿ ಭರತ್‌ ಪಟವಾರಿ, ಕೇವಲ ಲುಂಕರ್‌, ಸುರೇಶ್ ಬೂರಾತ್‌, ಯುವ ಘಟಕದ ಅಧ್ಯಕ್ಷ ಸಿರ್ದ್ಧಾಥ ಸೂರಾನಾ, ಪ್ರಧಾನ ಕಾರ್ಯದರ್ಶಿ ಭಾವೇಶ್‌ ನೇತಾನಿ ಮಹಿಳಾ ಘಟಕದ ಅಧ್ಯಕ್ಷ ಸಾಧನಾ ಜೈನ್‌, ಪ್ರಿಯದರ್ಶಿನಿ ಶಾಲೆಯ ಅಧ್ಯಕ್ಷ ಬಿ.ಡಿ. ಮೇಚಣ್ಣವರ್‌ ಇದ್ದರು.

ವಲಯ ಮಟ್ಟದ ಟೂರ್ನಿಮೆಂಟ್‌: ಸಂಸ್ಥೆಯ ವತಿಯಿಂದ ಈಚೆಗೆ ಹೊನಲು ಬೆಳಕಿನ ಕರ್ನಾಟಕ ವಲಯ ಮಟ್ಟದ ವಾಲಿಬಾಲ್‌ ಟೂರ್ನಾಮೆಂಟ್ ಆಯೋಜಿಸಲಾಗಿತ್ತು. ಮೈಕ್ರೋಫಿನಿಶ್‌ ಸಂಸ್ಥಾಪಕ ತಿಲಕ್‌ ವಿಕಂಶಿ, ಜಿತೋ ಅಂತರರಾಷ್ಟ್ರೀಯ ಶಾಖೆಯ ಅಧ್ಯಕ್ಷ ಗೌತಮ್‌ ಓಸ್ತವಾಲ್‌, ಸೋಹನ್‌ ಜೈನ್‌, ಭವರಲಾಲ್‌ ಜೈನ್‌, ಪೂರನ್‌ ನಾಹತಾ ಭಾಗವಹಿಸಿದ್ದರು.

ಗದಗ, ಬೆಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿಯಿಂದ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಬೆಂಗಳೂರು ತಂಡವು ವಿಜೇತರಾಗಿ ಹೊರಹೊಮ್ಮಿತು. ಬೆಳಗಾವಿ ತಂಡವು ಎರಡನೇ ಸ್ಥಾನಕ್ಕೆ ಗಳಿಸಿತು. ಟೂರ್ನಿ ಸಂಚಾಲಕ ರಾಜನ್‌ ಜೈನ್‌, ಆಶಿಷ್‌ ನಾಹತಾ, ಬಾಹುಬಲ ತಾತೇಡ್‌, ಸಹ ಸಂಚಾಲಕ ನಿಶೀತ್‌ ಸೂರಾನಾ, ಪ್ರವೀಣ್‌ ಚೌಧರಿ, ಜೈನಂ ಜೈನ್‌, ನಮನ್‌ ಜೈನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT