ಹುಬ್ಬಳ್ಳಿ: ‘ರೈಲ್ವೆ ಟಿಕೆಟ್ ದರವನ್ನು ಪ್ರತಿ ಕಿಲೊ ಮೀಟರ್ಗೆ ಕೇವಲ ಒಂದು ಪೈಸೆ ಮಾತ್ರ ಏರಿಸಲಾಗಿದೆ. ಇದು ಹೊರೆಯಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಸ್ಸಿಗೆ ಹೋಲಿಸಿದರೆ ರೈಲ್ವೆ ಟಿಕೆಟ್ ದರ ಕಡಿಮೆ. ಬಡವರಿಗೆ ಹೊರೆ ಆಗಬಾರದು ಎಂದು ರೈಲಿನ ದರದ ಬಗ್ಗೆ ಗಮನ ಹರಿಸಲಾಗುತ್ತಿದೆ. ಜನರ ಅಪೇಕ್ಷೆಗೆ ತಕ್ಕಂತೆ ರೈಲಿನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಹೀಗಾಗಿ 1 ಕಿ.ಮೀಗೆ 1 ಪೈಸೆ ಹೆಚ್ಚಳ ಮಾಡಲಾಗಿದೆ’ ಎಂದರು.

‘ಹುಬ್ಬಳ್ಳಿಯಿಂದ ಧಾರವಾಡಕ್ಕೆ ರೈಲಿನಲ್ಲಿ ಪ್ರಯಾಣಿಸಿದರೆ 25 ಪೈಸೆ ಮಾತ್ರ ಹೆಚ್ಚಾಗಲಿದೆ. ರೈಲಿನಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ಸಬ್ಸಿಡಿ ಸಿಗುತ್ತದೆ. ರೈಲ್ವೆ ಇಲಾಖೆಗೆ ಪ್ರಯಾಣಿಕರ ಸಂಚಾರಕ್ಕಿಂತ ಗೂಡ್ಸ್ ಸಾಗಣೆಯಿಂದ ಹೆಚ್ಚು ಲಾಭ ಬರುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.