ಕಲಘಟಗಿ: ದೇಶದಾದ್ಯಂತ ಪತ್ರಿಕೆ ಹಾಗೂ ಮಾಧ್ಯಮದ ಮೂಲಕ ಬಿತ್ತರಿಸುವ ಸುದ್ದಿಯನ್ನು ಕೋಟ್ಯಂತರ ಜನರು ವೀಕ್ಷಣೆ ಮಾಡುತ್ತಾರೆ. ಅಂತಹ ಪರಮ ಪವಿತ್ರವಾದ ಪತ್ರಿಕಾ ವೃತ್ತಿಗೆ ಧಕ್ಕೆ ಬಾರದಂತೆ ಸತ್ಯ ಸಂಗತಿ ಅರಿತು ಸುದ್ದಿ ಪ್ರಸಾರ ಮಾಡಲು ಪ್ರಯತ್ನ ಮಾಡಿ ಎಂದು ಹುಬ್ಬಳ್ಳಿಯ ಸ್ವರ್ಣಾ ಗ್ರೂಪ್ ಆಫ್ ಕಂಪನಿ ಮಾಲೀಕರಾದ ಡಾ.ಪ್ರಸಾದ್ ಕಿವಿ ಮಾತು ಹೇಳಿದರು.

ಸ್ಥಳೀಯ ಗುಡ್ ನ್ಯೂಸ್ ಪದವಿ ಪೂರ್ವ ವಿದ್ಯಾಲಯದ ಸಭಾ ಭವನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕಾ ವಿತರಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪತ್ರಿಕಾ ರಂಗ ಪ್ರಜಾಪ್ರಭುತ್ವದ ಬಲಿಷ್ಠತೆ ಹಾಗೂ ಸದೃಢ ಭಾರತ ನಿರ್ಮಾಣಕ್ಕೆ ಬಹು ಮುಖ್ಯ ಪಾತ್ರ ವಹಿಸಿದೆ. ಯಾವ ಸರ್ಕಾರಗಳು ಏನೇ ತಪ್ಪು ಮಾಡಿದರೂ ಅವರ ಬಗ್ಗೆ ಸಮಾಜಕ್ಕೆ ತಪ್ಪು ಸರಿ ಪ್ರಸಾರ ಮಾಡುವುದರ ಜೊತೆಗೆ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿರುವ ವಿಶ್ವಾಸ ನನಗಿದೆ ಎಂದರು.

ಕರ್ನಾಟಕ ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಜೆ.ಎಂ.ಚಂದುನವರ ಗ್ರಾಮೀಣ ವರದಿಗಾರಿಕೆ ಮತ್ತು ಸವಾಲುಗಳ ಕುರಿತು ಉಪನ್ಯಾಸ ನೀಡಿ, ಪತ್ರಕರ್ತರು ತಮ್ಮ ಜೀವನ ನಿರ್ವಹಣೆಯೊಂದಿಗೆ ಪತ್ರಿಕೋದ್ಯಮದ ಮೌಲ್ಯದ ವೃತ್ತಿ ಕಾಪಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಯಾವುದಾದರು ವೃತ್ತಿ ಇದ್ದರೆ ಅದು ಪತ್ರಕರ್ತರಿಂದ ಮಾತ್ರ ಸಾಧ್ಯ. ಸಮಾಜದಲ್ಲಿ ಯಾವುದೇ ಘಟನೆಗಳು ನಡೆದಾಗ ಧೈರ್ಯದಿಂದ ಪ್ರಶ್ನೆ ಮಾಡುವ ಹಕ್ಕು ಪತ್ರಕರ್ತರಿಗೆ ಇದೆ. ಅದನ್ನು ಉಳಿಸುವ ಪ್ರವೃತ್ತಿ ಬೆಳಿಸಿಕೊಳ್ಳಿ ಎಂದರು.

ಪಿಎಸ್ ಐ ಬಸವರಾಜ ಯದ್ದಲಗುಡ್ಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲೋಚನೇಶ ಹೂಗಾರ ಮಾತನಾಡಿದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪ್ರಲ್ಹಾದಗೌಡ ಗೊಲ್ಲಗೌಡರ, ಈರಪ್ಪ ನಾಯ್ಕರ ಅವರನ್ನು ಸನ್ಮಾನಿಸಲಾಯಿತು.

ಪತ್ರಿಕಾ ವಿತರಕರಿಗೆ ಜಾಕೆಟ್ ವಿತರಿಸಲಾಯಿತು. ಕಲಾವಿದ ಹಾಗೂ ಹಿರಿಯ ಪತ್ರಕರ್ತ ರವಿ ಬಡಿಗೇರ ಬಿಡಿಸಿದ ಚಿತ್ರಕಲಾ ಪ್ರದರ್ಶನ ಜರುಗಿತು.

ಪಟ್ಟಣದ ಅನ್ನಪೂರ್ಣ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಅನ್ನಪೂರ್ಣ ಹರಮಣ್ಣವರಿಂದ ನೃತ್ಯ ಹಾಗೂ ಗುಡ್ ನ್ಯೂಸ್ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಪತ್ರಕರ್ತರ ಸಂಘದ ತಾಲ್ಲೂಕು ಘಟದ ಅಧ್ಯಕ್ಷ ಕಲ್ಲಪ್ಪ ಮಿರ್ಜಿ ಅಧ್ಯಕ್ಷತೆ ವಹಿಸಿದ್ದರು. ಸೋಮಶೇಖರ್ ಬೆನ್ನೂರ, ವಕೀಲರ ಸಂಘದ ತಾಲ್ಕೂಕು ಘಟಕದ ಅಧ್ಯಕ್ಷ ಅಣ್ಣಪ್ಪ ಓಲೇಕಾರ, ಸುಶೀಲೇಂದ್ರಾಚಾರ್ಯ ಕುಂದರಗಿ, ಪರಮಾನಂದ ಒಡೆಯರ, ಸರ್ಕಾರಿ ನೌಕರ ಸಂಘದ ತಾಲ್ಕೂಕು ಘಟಕದ ಅಧ್ಯಕ್ಷ ಆರ್.ಎಂ. ಹೊಲ್ತಿಕೋಟಿ, ಗುಡ್ ನ್ಯೂಸ್ ಕಾಲೇಜಿನ ಆಡಳಿತಧಿಕಾರಿ ವರ್ಗಿಸ್.ಕೆ.ಜೆ, ಪ್ರಾಚಾರ್ಯ ನವೀನಾ ರಡ್ಡೇರ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.