ಅಣ್ಣಿಗೇರಿ: ‘ನೆಲ, ಜಲ, ಭಾಷೆಯ ಉಳಿವಿಗೆ ಶ್ರಮಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ’ ಎಂದು ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೌಜಲಗಿ ಹೇಳಿದರು.

ಆದಿಕವಿ ಪಂಪನ ಜನ್ಮಸ್ಥಳವಾದ ಇಲ್ಲಿನ ದೇಶಪಾಂಡೆ ವಾಡೆಯಲ್ಲಿ ತಾಲ್ಲೂಕು ಕಸಾಪ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ದತ್ತಿನಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ಸಾಹಿತಿ ಮಂಜುನಾಥ ತಿಗಡಿ ಅವರ ‘ಕಾವ್ಯ ಲಹರಿ’ ಕವನ ಸಂಕಲನವನ್ನು ಪ್ರೊ.ಎಸ್.ಎಸ್.ಹರ್ಲಾಪೂರ ಬಿಡುಗಡೆ ಮಾಡಿ ಮಾತನಾಡಿ, ಮಂಜುನಾಥ ಅವರು ಅನುಭವಿಸಿದ ನೋವು, ಕಷ್ಟಗಳನ್ನು ಕವನಗಳ ಮೂಲಕ ಅಭಿವ್ಯಕ್ತಿಸಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ದೇವರಾಜ ನಾವಳ್ಳಿ ಅವರಿಗೆ ‘ಸಾವಯವ ಕೃಷಿ ಋಷಿ ಪ್ರಶಸ್ತಿ’, ಪ್ರಶಾಂತ ಹಂದಿಗೋಳ ಅವರಿಗೆ ‘ಕವಿ ಚಕ್ರವರ್ತಿ ರನ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಾಪ ಸದಸ್ಯ ಶರಣಬಸಪ್ಪ ಯತ್ನಳ್ಳಿ ಅವರನ್ನು ಸನ್ಮಾನಿಸಲಾಯಿತು.

ಮಹಮ್ಮದ್ ರಫೀಕ್ ಮುಳಗುಂದ, ಶಾಂತಾ ಲಕ್ಷ್ಮೇಶ್ವರ, ಡಿ.ಆರ್.ಕಬ್ಬೂರ, ಪ್ರಶಾಂತ ಹಂದಿಗೋಳ ಅವರಿಂದ ಗೀತ ಗಾಯನ ನಡೆಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ತಾಲ್ಲೂಕು ಕಸಾಪ ಅಧ್ಯಕ್ಷ ಅನ್ವರಭಾಷಾ ಹುಬ್ಬಳ್ಳಿ, ಸಾಹಿತಿ ಅಮೃತೇಶ ತಂಡರ, ಎಂ.ಎಸ್.ಪೂಜಾರ, ಮಂಜುನಾಥ ತಿಗಡಿ, ಜಿ.ವೈ.ಕೊರವರ, ಲಲಿತಾ ಸಾಲಿಮಠ, ಚಂದ್ರಕಾಂತ ವೇರ್ಣೆಕರ, ಅರುಣಕುಮಾರ ಹೂಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.