ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಪಡೆಯಲಿರುವ ಕಿಮ್ಸ್‌ ಸಿಬ್ಬಂದಿ

ಹುಬ್ಬಳ್ಳಿಯಲ್ಲಿ ಲಸಿಕೆ ವಿತರಣೆಗೆ ಪ್ರಧಾನಿ ಮೋದಿ ಇಂದು ಚಾಲನೆ
Last Updated 16 ಜನವರಿ 2021, 3:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್‌)ಶನಿವಾರ ಬೆಳಿಗ್ಗೆ 10.30ಕ್ಕೆ ಕಿಮ್ಸ್‌ ‘ಡಿ’ ಗ್ರೂಪ್‌ ನೌಕರರೊಬ್ಬರು ಕೋವಿಡ್‌ಗೆ ಲಸಿಕೆ ಪಡೆಯಲಿದ್ದಾರೆ.ಈ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಮೂಲಕ ಚಾಲನೆ ನೀಡಲಿದ್ದಾರೆ.

ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ತಯಾರಿಸಿರುವ ಲಸಿಕೆಯನ್ನು ಕಿಮ್ಸ್‌ ಸಿಬ್ಬಂದಿ ಪಡೆಯಲಿದ್ದು, ಇದಕ್ಕಾಗಿ ಆಸ್ಪತ್ರೆಯಲ್ಲಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಇದೇ ವೇಳೆ ಪ್ರಧಾನಿ ಕಿಮ್ಸ್‌ ಸಿಬ್ಬಂದಿ, ವೈದ್ಯರು ಮತ್ತು ಆಡಳಿತಾಧಿಕಾರಿ ಜೊತೆ ಸಂವಾದ ನಡೆಸುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಒಂದೇ ದಿನ 100ಕ್ಕೂ ಹೆಚ್ಚು ಕೋವಿಡ್‌ ವಾರಿಯರ್‌ಗಳು ಲಸಿಕೆ ಪಡೆಯಲಿದ್ದಾರೆ.

‘ಕಿಮ್ಸ್‌ಗೆ ಒಂದು ಸಾವಿರ ಲಸಿಕೆಗಳ ಡೋಸ್‌ಗಳು ಬಂದಿವೆ. ಲಸಿಕೆ ನೀಡಲು ನಾಲ್ಕು ಕಡೆ ವ್ಯವಸ್ಥೆ ಮಾಡಲಾಗಿದ್ದು, ಜ. 18ರಿಂದ ನಿತ್ಯ ಒಂದು ಸಾವಿರ ಜನರಿಗೆ ನೀಡಲಾಗುವುದು. ನಾಲ್ಕು ದಿನಗಳಲ್ಲಿ ಕಿಮ್ಸ್‌ನ 3,750 ಸಿಬ್ಬಂದಿ ಲಸಿಕೆ ಪಡೆಯಲಿದ್ದಾರೆ’ ಎಂದು ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಅರುಣಕುಮಾರ ತಿಳಿಸಿದರು.

ಸ್ವಯಂಪ್ರೇರಿತರಾಗಿ ಶುಕ್ರವಾರ ಲಸಿಕೆ ಪಡೆಯಲಿರುವ ಜಿಲ್ಲೆಯ ವೈದ್ಯ ಜಿ.ಬಿ. ಸತ್ತೂರ ಪ್ರತಿಕ್ರಿಯಿಸಿ ‘ಭಾರತೀಯ ವೈದ್ಯಕೀಯ ಲಸಿಕೆ ತಯಾರಕರ ಬಗ್ಗೆ ನನಗೆ ಸಂಪೂರ್ಣವಾಗಿ ನಂಬಿಕೆಯಿದೆ. ಜಗತ್ತಿನಲ್ಲಿಯೇ ಶ್ರೇಷ್ಠವಾದ ಲಸಿಕೆ ಇದಾಗಿದೆ. ಲಸಿಕೆ ಪಡೆಯುವ ಉದ್ದೇಶ ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳುವುದಷ್ಟೇ ಅಲ್ಲ; ಬೇರೆಯವರಿಗೂ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವುದಾಗಿದೆ. ವೈದ್ಯನಾಗಿ ನಾನು ಲಸಿಕೆ ಪಡೆಯುವುದರಿಂದ ಇತರರಿಗೂ ಲಸಿಕೆ ಸುರಕ್ಷಿತ ಎನ್ನುವ ಸಂದೇಶ ನೀಡಲು ಸಾಧ್ಯವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT