ಹುಬ್ಬಳ್ಳಿ: ಹೈದರಾಬಾದ್ನ ನರಸಾಪುರದ ಬಿವಿಆರ್ಐಟಿ ಅಲ್ಲಿ ಈಚೆಗೆ ಮುಕ್ತಾಯಗೊಂಡ ಎಂ–ಬಿಎಜೆಎ ಎಸ್ಎಇ ಇಂಡಿಯಾ ಸ್ಪರ್ಧೆಯಲ್ಲಿ ಇಲ್ಲಿನ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನೊಳಗೊಂಡ ‘ಯೂರೊ ರೇಸಿಂಗ್’ ತಂಡವು ಅಖಿಲ ಭಾರತ ಶ್ರೇಯಾಂಕದಲ್ಲಿ 2ನೇ ಸ್ಥಾನ ಪಡೆದಿದೆ.

‘ತಂಡ ತಯಾರಿಸಿದ ಆಂತರಿಕ ದಹನಕಾರಿ ಎಂಜಿನ್ ಆಫ್-ರೋಡ್ ವಾಹನವು ಅಸಾಧಾರಣ ಕಾರ್ಯಕ್ಷಮತೆ, ತಾಂತ್ರಿಕ ತಪಾಸಣೆ, ಬ್ರೇಕ್ ಪರೀಕ್ಷೆ, ವೇಗವರ್ಧನೆ, ಸ್ಲೆಡ್ ಪುಲ್, ಕುಶಲ ಪರೀಕ್ಷೆ ಮತ್ತು 4 ಗಂಟೆಗಳ ಕಠಿಣ ಸಹಿಷ್ಣುತೆ ರೇಸ್ ಸೇರಿದಂತೆ ಎಲ್ಲ ಸುತ್ತುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ’ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಸಹಿಷ್ಣುತೆ ಪರೀಕ್ಷೆಯಲ್ಲಿ ಈ ವಾಹನವು ಮೊದಲ ಸ್ಥಾನ ಪಡೆದುಕೊಂಡಿದೆ. ತಂಡವು ರಾಷ್ಟ್ರಮಟ್ಟದ ಅತ್ಯುತ್ತಮ ಪ್ರದರ್ಶನಕ್ಕಾಗಿ ₹1.60 ಲಕ್ಷ ನಗದು ಬಹುಮಾನ ಪಡೆದುಕೊಂಡಿದೆ. ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಶಾಖೆಗಳ ಒಟ್ಟು 18 ವಿದ್ಯಾರ್ಥಿಗಳು ತಂಡದಲ್ಲಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.