ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಮ್ಮ ದೇಹ ಸ್ಥಿತಿಯನ್ನು ಅರಿತುಕೊಳ್ಳಿ...’

Last Updated 1 ಡಿಸೆಂಬರ್ 2018, 9:51 IST
ಅಕ್ಷರ ಗಾತ್ರ

ಎಚ್‌ಐವಿ ಸಂಪೂರ್ಣವಾಗಿ ಗುಣಪಡಿಸಲಾಗದ ಸೋಂಕು. ಈ ಕುರಿತ ಜಾಗೃತಿಗೆ ಇಂದಿಗೆ 30ನೇ ವರ್ಷವಾದರೂ ಜನರಿಗೆ ಎಚ್‌ಐವಿ/ ಏಡ್ಸ್ ಅಂದರೆ ಒಂದು ಕೆಟ್ಟ ಭಾವನೆ. ಎಚ್‌ಐವಿ ಇದ್ದಂತಹ ರೋಗಿಗಳ ಬಗ್ಗೆ ತಾರತಮ್ಯ ಮಾಡುವುದು ಮಾತ್ರ ಹೊಗಿಲ್ಲ. ಇದರಿಂದ ಎಷ್ಟೋ ಸಾರಿ ಸಮಾಜಕ್ಕೆ ಹೆದರಿ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ. ಇನ್ನು ಮಾಡಿಸಿಕೊಂಡರೂ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳುವುದಿಲ್ಲ. ಅದಕ್ಕೆ ಈ ಸಲದ ಘೋಷಣೆ ‘ಎಲ್ಲರೂ ನಿಮ್ಮ ಸ್ಥಿತಿಯನ್ನು ಅರಿತುಕೊಳ್ಳಿ’ ಅಂದರೆ ಎಲ್ಲರಿಗೂ ಅವರ ಬಗ್ಗೆ ತಿಳಿದುಕೊಳ್ಳಲು ಹುರಿದುಂಬಿಸುವುದು.

2020ರ ವರೆಗೆ ನಮ್ಮ ಗುರಿ ಅಂದರೆ ಶೇ 90ರಷ್ಟು ಎಚ್‌ಐವಿ ಸೋಂಕಿರುವವರು ತಮ್ಮ ಎಚ್‌.ಐ.ವಿ. ಸ್ಥಿತಿಯನ್ನು ತಿಳಿದಿರಬೇಕು.

ಶೇ 90ರಷ್ಟು ಎಚ್.ಐ.ವಿ ಸೋಂಕಿತರು ಎ.ಆರ್.ಟಿ ಚಿಕಿತ್ಸೆಯನ್ನು ಪಡೆದಿರಬೇಕು. ಎ.ಆರ್.ಟಿ ಪಡೆಯುತ್ತಿರು
ವವರು ತಮ್ಮ ವೈರಲ್ ಲೋಡ್ ಪ್ರಮಾಣ ಹೆಚ್ಚಾಗದಂತೆ ಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಯಲ್ಲಿ ಐ.ಸಿ.ಟಿ,ಸಿ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಬಂದಂತಹ ಅಭ್ಯರ್ಥಿಗಳಿಗೆ ಆಪ್ತಸಮಾಲೊಚಕರು ಎಚ್‌.ಐ.ವಿ ಬಗ್ಗೆ ಸಮಗ್ರ ಮಾಹಿತಿ ನೀಡಿ, ರಕ್ತತಪಾಸಣೆ ಮಾಡುತ್ತಾರೆ. ವರದಿಯನ್ನು ಗುಪ್ತವಾಗಿ ಇಡಲಾಗುತ್ತದೆ.

ಇನ್ನು ಗರ್ಭಿಣಿಯರು ತಪ್ಪದೆ ಮೂರು ತಿಂಗಳು ಇರುವಾಗಲೆ ತಪ್ಪದೆ ಎಚ್.ಐ.ವಿ ಪರೀಕ್ಷೆ ಮಾಡಿಸಿಕೊಳಬೇಕು. ಅವರಿಗೆ ಏನಾದರೂ ಸೋಂಕು ತಗುಲಿದ್ದರೆ ಮಗುವಿಗೆ ಎಚ್.ಐ.ವಿ ಬಾರದ ಹಾಗೆ ಔಷಧಿಯನ್ನು ನೀಡಿ ಮಗುವನ್ನು ಅದರಿಂದ ಕಾಪಾಡಬಹುದು. ತಾಯಿಗೂ ಸಹ ಎ.ಆರ್.ಟಿ ಮಾತ್ರೆಯನ್ನು ಆರಂಭ ಮಾಡಬೇಕು.

ಸೋಂಕಿತ ತಾಯಿಯು ಮಗುವಿಗೆ ಎದೆ ಹಾಲು ನೀಡಬಹುದು. ಎದೆ ಹಾಲು ಅತ್ಯಂತ ಸೂಕ್ತವಾದ ಆಹಾರ. ಆದರೆ ಉಸ್ತುವಾರಿಗೆ ತಾಯಿಯು ಐ.ಸಿ.ಟಿ,ಸಿ ಕೇಂದ್ರದೊಂದಿಗೆ ನಿಯಮಿತ ಸಂಪರ್ಕ ಹೊಂದಿರಬೇಕು. ಸರಿಯಾಗಿ ಎ.ಆರ್.ಟಿ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಆರು ತಿಂಗಳವರೆಗೆ ಎದೆ ಹಾಲನ್ನು ಮಾತ್ರ ಕೊಡಬೇಕು.

ಮಗುವಿನ ರಕ್ತ ತಪಾಸಣೆಯನ್ನು 6 ವಾರ, 6 ತಿಂಗಳು, 12 ತಿಂಗಳು, 18 ತಿಂಗಳಲ್ಲಿ ಐ.ಸಿ.ಟಿ,ಸಿ ಕೇಂದ್ರದಲ್ಲಿ ಮಾಡಿಸಬೇಕು. ಇದರಿಂದ ಮಗುವಿಗೆ ತೊಂದರೆ ಬರುವುದಿಲ್ಲ. ಬಹಳ ಜನಕ್ಕೆ ತಾಯಿಯಿಂದ ಮಕ್ಕಳಿಗೆ ಬಂದರೆ ಮಗು ಬದುಕುವುದಿಲ್ಲ ಅನ್ನುವ ಭಾವನೆ ಇದೆ. ಇದು ಸರಿಯಲ್ಲ.

‘ಎಲ್ಲರ ಎಚ್‌ಐವಿ ಸ್ಥಿತಿ ಅರಿತುಕೊಳ್ಳಿ’ ಘೋಷಣೆಯಡಿ ವಿವಿಧೆಡೆಯಂತೆ ಜೈಲಿಗೆ ಹೊಗಿ ಕೈದಿಗಳ ರಕ್ತ ತಪಾಸಣೆಯನ್ನು ‘ಸಾಥಿ’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಪಡೆದು, ಅವರ ಸಮ್ಮುಖದಲ್ಲಿಯೇ ನಮ್ಮ ಆಪ್ತ ಸಮಾಲೋಚಕರು ಮತ್ತು ಪ್ರಯೋಗಶಾಲೆ ತಂತ್ರಜ್ಞರ ಒಟ್ಟಿಗೆ ಮಾಡಲಾಯಿತು.

ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ 577 ಕೈದಿಗಳನ್ನು ತಪಾಸಣೆ ಮಾಡಲಾಯಿತು. ಅವರಲ್ಲಿ ಎಚ್‌ಐವಿ ಸೋಂಕು ತಗುಲಿರುವ ಒಬ್ಬ ಕೈದಿ ಪತ್ತೆಯಾಗಿದ್ದು ಎ.ಆರ್.ಟಿ ಚಿಕಿತ್ಸೆಯನ್ನು ಕೊಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT