ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರುಸಾವಿರಪ್ಪ ಕೊರವಿ ಕೊಡುಗೆ ಅಪಾರ: ಬೊಮ್ಮಾಯಿ

Last Updated 25 ಜುಲೈ 2021, 13:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅವಳಿನಗರದ ಬೆಳವಣಿಗೆಗೆ ಮೂರುಸಾವಿರಪ್ಪ ಕೊರವಿ ಅವರ ಕೊಡುಗೆ ಅಪಾರ.ಮಹಾನಗರ ಪಾಲಿಕೆ ಸದಸ್ಯರಾಗಿ, ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಜನಮಾನಸದಲ್ಲಿ ಉಳಿಯುವಂತಹ ಕೆಲಸಗಳನ್ನು ಅವರು ಮಾಡಿದ್ದಾರೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಕೊರವಿ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ, ನಗರದ ಉಣಕಲ್‌ನ ಸಿದ್ದೇಶ್ವರ ಸ್ವಾಮಿ ಹೊಸಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಕಳಕಳಿ ಹೊಂದಿದ್ದ ಕೊರವಿ ಅವರು, ಹಿಂದುಳಿದವರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ ಧೀಮಂತ ರಾಜಕಾರಣಿಯಾಗಿದ್ದರು. ನನ್ನ ತಂದೆ ಎಸ್. ಆರ್. ಬೊಮ್ಮಾಯಿ ಅವರೊಡನೆ ಸಹೋದರರಂತಿದ್ದರು. ತಂದೆ ಜತೆ ಸದಾ ಒಡನಾಟ ಇಟ್ಟುಕೊಂಡಿದ್ದ ಅವರು ನನಗೆ ಚಿಕ್ಕಪ್ಪನಂತಿದ್ದರು.ಶ್ರೀಮಂತರಾದರೂ ಯಾವುದೇ ಬಿಗುಮಾನವಿರಲಿಲ್ಲ’ ಎಂದರು.

ಬಿಜೆಪಿ ಮುಖಡ ರಾಜಣ್ಣ ಕೊರವಿ ಮಾತನಾಡಿ, ‘ಸಮಾಜಮುಖಿಯಾಗಿದ್ದ ತಮ್ಮ ತಂದೆ–ತಾಯಿಯ ಸ್ಮರಣಾರ್ಥವಾಗಿ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡು, ಬಡವರ ಸೇವೆ ಮಾಡುತ್ತಿದ್ದೇವೆ. ಮುಂದೆಯೂ ಇದು ಮುಂದುವರಿಯಲಿದೆ’ ಎಂದು ಹೇಳಿದರು.

ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.ನಿರ್ಮಲಾ ಫೌಂಡೇಷನ್‌ನ ಡಾ. ಕೃಷ್ಣಪ್ರಸಾದ್, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಡಾ. ಶ್ರೀನಿವಾಸ್ಜೋಶಿ ಹಾಗೂ ಡಾ. ತಮ್ಮಣ್ಣ ಗಂಡಮಾಲೆ, ತಿಪ್ಪನ್ನ ಮಜ್ಜಗಿ, ಉಮೇಶಗೌಡ ಕೌಜಗೇರಿ, ಬಸವರಾಜ ಹೆಬ್ಬಳ್ಳಿ, ಮಹದೇವಪ್ಪ ಮೆಣಸಿನಕಾಯಿ, ಡಾ. ಸಿದ್ಧಯ್ಯ ಹಿರೇಮಠ, ಸಿದ್ದನಗೌಡರ ಮರಿಗೌಡರ, ಚನ್ನು ಪಾಟೀಲ್, ದ್ಯಾಮಣ್ಣ ಮೆಣಸಿನಕಾಯಿ, ರಾಮಣ್ಣ ಕೋಕಾಟಿ, ಅಡಿವೆಪ್ಪ ಮೆಣಸಿನಕಾಯಿ, ಶಿವಾಜಿ ಕನ್ನಿಕೊಪ್ಪ, ಎಸ್.ಐ. ನೇಕಾರ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಡಾ. ವಿಶ್ವನಾಥ ಕೊರವಿ, ಶಶಿಧರ ಕೊರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT