ಗುರುವಾರ , ಆಗಸ್ಟ್ 18, 2022
27 °C

ಹೊಸ ಕೌಶಲ ರೂಢಿಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳ್ನಾವರ: ಸರ್ಧಾತ್ಮಕ ಪ್ರಪಂಚದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಮುಂದೆ ಬರಬೇಕು. ಹೊಸ ಕೌಶಲ ರೂಢಿಸಿಕೊಂಡು ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ (ಸಿಡಾಕನ್‌) ಧಾರವಾಡ ಘಟಕದ ನಿರ್ದೇಶಕ ಬಿ.ಎಂ. ಗೋಟೂರ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎ ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಉದ್ಯಮಶೀಲತಾ ತಿಳಿವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದರು. ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಡಾ. ಚಂದ್ರಪ್ಪ, ಸಿಡಾಕನ್ ಜಂಟಿ ನಿರ್ದೇಶಕ ಚಂದ್ರಶೇಖರ ಅಂಗಡಿ ಮಾತನಾಡಿದರು.

₹5 ಲಕ್ಷ ಸಹಾಯ ಧನ ಪಡೆದು ನೈಸರ್ಗಿಕ ಎಣ್ಣೆ ತಯಾರಿಕಾ ಉದ್ಯಮದಲ್ಲಿ ಯಶಸ್ಸು ಕಂಡ ಸ್ಥಳಿಯ ಯುವ ಉದ್ಯಮಿ ಕಾಶಿನಾಥ ಕೌಜಲಗಿ ವೃತ್ತಿ ಬದುಕಿನ ಅನುಭವ ಹಂಚಿಕೊಂಡರು. ರಾಜಶೇಖರ ಪಾಟೀಲ ತಾಂತ್ರಿಕ ಅಧೀವೇಶನ ನಡೆಸಿಕೊಟ್ಟರು. 60 ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ರೋಹಿಣಿ ಘಂಟೆ, ಶ್ರೀದೇವಿ, ಮೌನೇಶ ಬಡಿಗೇರ ತರಬೇತಿ ನೀಡಿದರು.

ಪ್ರಾಂಶುಪಾಲ ಡಾ. ಸುರೇಶ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಸೌಜನ್ಯ ಪಾರಿಶ್ವಾಡ ಪ್ರಾರ್ಥಿಸಿದರು. ಶಿವಾನಂದ ಕಲ್ಲಾಪೂರ, ಈಶ್ವರಿ ಕಲಾಲ, ಸಂಜನಾ ಕುನ್ನೂಕರ ನಿರೂಪಿಸಿದರು. ಉದ್ಯೋಗ ಭರವಸೆ ಕೋಶದ ಸಂಚಾಲಕ ಪ್ರೊ. ಶ್ರೀಪಾಲ ಕುರಕುರಿ ಕಾರ್ಯಕ್ರಮ ಸಂಘಟಿಸಿದರು.
ಅಶ್ವಿನಿ ನಿಪ್ಪಾಣಿ, ಪಿ.ಬಿ. ಚಾರಿ, ಉಮೇಶ ದೊಡ್ಡಮನಿ, ಸಿದ್ದೇಶ್ವರ ಕಣಬರ್ಗಿ, ಪಿ.ವೈ ಕಮ್ಮಾರ, ದೇವೇಂದ್ರ ತಳವಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.