ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ₹5.54 ಲಕ್ಷ ಮೌಲ್ಯದ ವಸ್ತು ಕಳ್ಳತನ

Last Updated 17 ಡಿಸೆಂಬರ್ 2021, 5:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಬಸವನಗರದಲ್ಲಿರುವ ಎ.ಎನ್‌. ಪರಮೇಶ್ವರಪ್ಪ ಎಂಬುವರು ಮನೆಗೆ ಬೀಗ ಹಾಕಿಕೊಂಡು ಹೋದಾಗ ಕಳ್ಳತನ ನಡೆದಿದೆ.

66 ಗ್ರಾಂ ತೂಕದ ಬಂಗಾರದ ಒಡವೆ, 3,700 ಗ್ರಾಂ ತೂಕದ ಬೆಳ್ಳಿ ವಸ್ತು, ₹31 ಸಾವಿರ ಮೌಲ್ಯದ ಇತರ ವಸ್ತುಗಳು ಹಾಗೂ ₹1 ಲಕ್ಷ ಮೌಲ್ಯದ ಎಲ್‌ಇಡಿ ಟಿವಿ, ಐ ಫೋನ್‌, ಐ ಪ್ಯಾಡ್‌ ಹಾಗೂ ಲ್ಯಾಪ್‌ಟಾಪ್‌ ಕಳ್ಳತನ ಮಾಡಲಾಗಿದೆ. ಇವೆಲ್ಲವುದರ ಒಟ್ಟು ಮೌಲ್ಯ ₹5.54 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ಬಡಾವಣೆಯ ಕುಬೇರಪ್ಪ ಎಂಬುವರ ಮನೆಯಲ್ಲಿ ಡಿ. 4ರಂದು ಕಳ್ಳತನ ನಡೆದಿದ್ದು, ಎರಡು ದಿನಗಳ ಹಿಂದೆ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2,035 ಗ್ರಾಂ ತೂಕದ ಬೆಳ್ಳಿ ವಸ್ತುಗಳು, ₹90 ಸಾವಿರ ಮೌಲ್ಯದ ಎಲ್‌ಇಡಿ ಟಿವಿ ಕಳ್ಳತನ ಮಾಡಿ, ಬೆಡ್‌ ರೂಮ್‌ನಲ್ಲಿ ಫ್ಯಾನ್‌ ಹಾನಿ ಮಾಡಿದ್ದಾರೆ. ಇದರಿಂದ ಒಟ್ಟು ₹3.4 ಲಕ್ಷ ಹಾನಿಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT