ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕನಿಷ್ಠ ವೇತನ ಜಾರಿ: ಸಂತೋಷ ಲಾಡ್

10 ಸಾವಿರ ‘ವಾರಿಯರ್ಸ್‌’ಗೆ ಸನ್ಮಾನ
Last Updated 9 ಮಾರ್ಚ್ 2022, 4:51 IST
ಅಕ್ಷರ ಗಾತ್ರ

ಕಲಘಟಗಿ: ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಂಗನವಾಡಿ, ಆಶಾ ಕಾರ್ಯಕರ್ತರು, ಆರೋಗ್ಯ ಸಹಾಯಕಿಯರಿಗೆ ಕನಿಷ್ಠ ವೇತನ ಜಾರಿಗೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ತಿಳಿಸಿದರು.

ತಾಲ್ಲೂಕಿನ ಮಡಕಿಹೊನ್ನಳಿ ಗ್ರಾಮದ ತಮ್ಮ ಅಮೃತ ನಿವಾಸದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಂಗಳವಾರ ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ಧಾರವಾಡ ಜಿಲ್ಲೆಯ 10 ಸಾವಿರ ಅಂಗನವಾಡಿ, ಆಶಾ, ಆರೋಗ್ಯ ಸಹಾಯಕಿಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಕಡಿಮೆ ವೇತನ ಇದ್ದರೂ ಹಗಲಿರುಳು ಜನರ ಜೀವ ಉಳಿಸಿಲು ಹೋರಾಟ ಮಾಡಿದ್ದನ್ನು ಎಲ್ಲರೂ ಸ್ಮರಿಸಬೇಕು ಎಂದರು.

ಸೇವಾ ಭದ್ರತೆ, ಕನಿಷ್ಠ ವೇತನ ಜಾರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಹಲವು ಬಾರಿ ಹೋರಾಟ ಮಾಡಿದರು ನಿಮ್ಮ ಕಡೆ ಗಮನಹರಿಸುತ್ತಿಲ್ಲ ಎಂದರು. ಕಲಘಟಗಿ ಹಾಗೂ ಅಳ್ಳಾವರ ನನಗೆ ರಾಜಕೀಯ ಪುನರ್ಜನ್ಮ ನೀಡಿದ ಮತಕ್ಷೇತ್ರ ಮುಂದಿನ ಚುನಾವಣೆಯಲ್ಲಿ ನಾನು ಕಲಘಟಗಿಯಿಂದ ಸ್ಪರ್ಧೆ ಮಾಡುವುದು ಖಚಿತ ಯಾವುದೇ ಅನುಮಾನ ಬೇಡ ಎಂದರು.

ಕೆಪಿಸಿಸಿ ವಕ್ತಾರೆ ಕವಿತಾ ರೆಡ್ಡಿ, ಕಾಂಗ್ರೆಸ್ ಮುಖಂಡರಾದ ಎಂ.ಎಂ. ಹಿಂಡಸಗೇರಿ, ಐ.ಜಿ. ಸನದಿ, ಎನ್.ಎಚ್. ಕೋನರಡ್ಡಿ, ಅನಿಲ ಕುಮಾರ್ ಪಾಟೀಲ್, ದೇವಕಿ ಯೋಗಾನಂದ, ಎಸ್.ಆರ್. ಪಾಟೀಲ, ಮಂಜುನಾಥ ಮುರಳ್ಳಿ, ಹರೀಶ ಶಂಕರ ಮಠದ, ಸೋಮಣ್ಣ ಬೆನ್ನೂರ, ಆನಂದ ಕಲಾಲ,ಗಂಗಾಧರ ಚಿಕ್ಕಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT