ಮಹಾತ್ಮಗಾಂಧಿ ನಗರ ವಿಕಾಶ ಯೋಜನೆ (ಎಂಜಿಎನ್‌ವಿವೈ) ಕಾಮಗಾರಿ ನಡೆದಿಲ್ಲ. ಟೆಂಡರ್ ಪ್ರಕ್ರಿಯೆ ಮುಗಿಸಿ ತ್ವರಿತವಾಗಿ ಕಾಮಗಾರಿ ಆರಂಭಿಸಬೇಕು
ಪ್ರದೀಪ ಶೆಟ್ಟರ ಸದಸ್ಯ ವಿಧಾನ ಪರಿಷತ್ತು
ಮಡಕಿಕೊಪ್ಪ ಕುಂಬಾರಕೊಪ್ಪ ಹತ್ತಿಕೊಳ್ಳ ಇತರೆಡೆಗಳಲ್ಲಿ ಗೌಳಿ ಸಮುದಾಯದವರಿಗೆ ಸಾಗುವಳಿ ಪತ್ರ ನೀಡಲು ಕ್ರಮ ವಹಿಸಬಹೇಕು. ಗೌಳಿ ದಡ್ಡಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಬೇಕು
ಎಫ್.ಎಚ್.ಜಕ್ಕಪ್ಪನವರ ಸದಸ್ಯ ವಿಧಾನ ಪರಿಷತ್ತು
ಮನೆಗಳಲ್ಲಿ ಪ್ರತಿದಿನ ಸಂಜೆ ಮೂರು ಗಂಟೆ ಮೊಬೈಲ್ ಫೋನ್ ಟಿವಿ ಬಂದ್ ವಿದ್ಯಾರ್ಥಿಗಳನ್ನು ಓದಲು ಪ್ರೋತ್ಸಾಹಿಸುವಂತೆ ಪೋಷಕರಿಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯವರು ಕ್ರಮ ವಹಿಸಬೇಕು
ಎಂ.ಆರ್.ಪಾಟೀಲ ಶಾಸಕ
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇರಬೇಕು. ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇಲ್ಲದವರಿಗೆ ನೋಟಿಸ್ ನೀಡಿ ಅಮಾನತುಗೊಳಿಸಲು ಕ್ರಮವಹಿಸಬೇಕು