ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಶಿವಳ್ಳಿ ಅಂತಿಮ ದರ್ಶನ‌ ಪಡೆದ ಸಾವಿರಾರು ಮಂದಿ: ಕಣ್ಣೀರಿಟ್ಟ ನಾಯಕರು

Last Updated 23 ಮಾರ್ಚ್ 2019, 12:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೃದಯಾಘಾತದಿಂದ ಹಠಾತ್ ನಿಧನರಾದ ಸಚಿವ ಸಿ.ಎಸ್. ಶಿವಳ್ಳಿ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ಕುಂದಗೋಳ ತಾಲ್ಲೂಕಿನ ಯರಗುಪ್ಪಿಯಲ್ಲಿ ಶನಿವಾರ ನಡೆಯಿತು.

ಸಾವಿರಾರು ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ನೆಚ್ಚಿನ ನಾಯಕನಿಗೆ ಕಣ್ಣೀರಿನ ವಿದಾಯ ಹೇಳಿದರು. ಶಿವಳ್ಳಿ ಅವರಿಗಿದ್ದ ಜನಪರ ಕಾಳಜಿ, ಅವರ ಸೇವೆ ಹಾಗೂ ಒಡನಾಟವನ್ನು ಸ್ಮರಿಸಿದ ಹಲವು ನಾಯಕರು ಗದ್ಗದಿತರಾದರು. ಶಿವಳ್ಳಿ ಅವರ ಕುಟುಂಬದ ಜೊತೆಗೆ ಇರುವುದಾಗಿ ಭರವಸೆಯನ್ನೂ ನೀಡಿದರು. ಸಚಿವ ಡಿ.ಕೆ. ಶಿವಕುಮಾರ ಭಾವುಕರಾಗಿ ಮಾತನಾಡಿದರೆ, ಮಾಜಿ ಸಚಿವ ವಿನಯ ಕುಲಕರ್ಣಿ ಕಣ್ಣೀರಿಟ್ಟಿರು. ಹೋರಾಟದಿಂದಲೇ ಸಾರ್ವಜನಿಕ ಜೀವನ ಪ್ರವೇಶಿಸಿದ ಶಿವಳ್ಳಿ ಅವರು‌ ಕೊನೆಯತನಕ ಪ್ರಾಮಾಣಿಕರಾಗಿ ಉಳಿದರು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಹರಿದು ಬಂದ ಜನ ಸಾಗರ

ಕುಂದಗೋಳದ ಜೆಎಸ್ ಎಸ್ ವಿದ್ಯಾಪೀಠದಲ್ಲಿ ಶುಕ್ರವಾರ ರಾತ್ರಿ ಸಾರ್ವಜನಿಜರ ದರ್ಶನಕ್ಕೆ ಶಿವಳ್ಳಿ ಅವರ ಪಾರ್ಥಿವ ಶರೀರ ಇಡಲಾಗಿತ್ತು. ಅಪಾರ ಪ್ರಮಾಣದ ಜನರು ಅಲ್ಲಿ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT