ಶನಿವಾರ, ಫೆಬ್ರವರಿ 4, 2023
21 °C

ಮನಸ್ಸಿಗೆ ಮುದ ನೀಡುವ ಸಂಗೀತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಸಂಗೀತ ಮನಸ್ಸಿಗೆ ಮುದ ನೀಡುತ್ತದೆ. ಏನಾದರೂ ಹೊಸದನ್ನು ಮಾಡಬೇಕೆಂಬ ಚೈತನ್ಯ ನೀಡುತ್ತದೆ. ಒತ್ತಡದಲ್ಲಿರುವವರು ಆಗಾಗ ಸಂಗೀತ ಆಲಿಸುವುದರಿಂದ, ಸಕಾರಾತ್ಮಕ ಬದಲಾವಣೆಗೂ ಕಾರಣವಾಗುತ್ತದೆ’ ಎಂದು ಸ್ಟೇಷನ್‌ ರಸ್ತೆಯ ಈಶ್ವರ ದೇವಸ್ಥಾನದ ಚೇರ್ಮನ್‌ ಲಕ್ಷ್ಮಣ ಒಕ್‌ ಅಭಿಪ್ರಾಯಪಟ್ಟರು.

ರಂಗ ರೇಖಾ ಕಲಾ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಮಹಾರಾಷ್ಟ್ರ ಮಂಡಳದಲ್ಲಿ ಇತ್ತೀಚೆಗೆ ಜರುಗಿದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಿ.ಎಂ. ಚನ್ನಬಸಪ್ಪ, ಆರ್.ಎಂ. ಗೊಗೇರಿ, ವಿರುಪಾಕ್ಷ ಕಟ್ಟಿಮನಿ, ಚನ್ನಬಸಪ್ಪ ಧಾರವಾಡ ಶೆಟ್ಟರ, ಡಿ.ಎಂ. ಬುರುಡಿ, ಸಂಧ್ಯಾ ದೀಕ್ಷಿತ ಅವರನ್ನು ಸನ್ಮಾನಿಸಲಾಯಿತು.

ಶ್ರುತಿ ಅಥಣಿ ಸಂಗಡಿಗರಿಂದ ನಾಡಗೀತೆ, ಮಂದಹಾಸ ಕಲಾ ವೃಂದದಿಂದ ಜಾನಪದ ಗೀತೆ, ತುಕಾರಾಮ ಕಟಾರೆ ಮತ್ತು ಸದಾನಂದ ಬೆಂಡಿಗೇರಿ ಅವರಿಂದ ಭಕ್ತಿಗೀತೆ, ಸಯ್ಯದ್ ಮಾಸ್ತರ ಅವರಿಂದ ರಂಗ ಗೀತೆ ಹಾಗೂ ವೈ. ಕಾಶಣ್ಣ ಮತ್ತು ರಾಜೇಂದ್ರ ದೇಶಪಾಂಡೆ ಅವರಿಂದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ನಡೆಸಿತು. ಸಂಗೀತ ವಾದ್ಯದಲ್ಲಿ ಮಂಜುನಾಥ ಇಂಗಳಹಳ್ಳಿ, ಮಂಜುನಾಥ ಹುಂಬಿ, ಪ್ರಕಾಶ ಡಾವಣಗೆರಿ ಹಾಗೂ ಶಿವುಕುಮಾರ ಅರ್ಕಸಾಲಿ ಸಾಥ್ ನೀಡಿದರು.

ವೀಣಾ ಅಟವಲೆ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲ್ಲೂಕು ಘಟದಕ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ, ಮಹೇಶ ಹೊರಕೇರಿ, ಬಸವರಾಜ ಚಕ್ರಸಾಲಿ, ಫಕ್ಕಿರೇಶ ಮುಗುಳಿ, ಸುಬಾಸ ಮೆಹರವಾಡೆ, ಶೋಭಾ ಪವಾರ, ಶಿವಾನಂದ ದಾಸಪ್ಪನವರ, ಶಂಭು ಮರದಣ್ಣವರ, ಶಿವಣ್ಣ ಪೆರೂರ, ವಿನೋದ ಅಂಗಡಿ, ಪ್ರಕಾಶ ಉಳ್ಳಾಗಡ್ಡಿ, ಮಂಜುನಾಥ ಹಡಪದ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು