ಧಾರವಾಡ: ನಗರದ ಸ್ವರ ಸಾಮ್ರಾಟ ಪಂಡಿತ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನೀಡುವ ಸ್ವರ ಸಾಮ್ರಾಟ ಪಂಡಿತ ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿಗೆ ಗಾಯಕ ಬೆಂಗಳೂರಿನ ವಿನಾಯಕ ತೊರವಿ, ರಾಷ್ಟ್ರೀಯ ಯುವ ಪ್ರಶಸ್ತಿಗೆ ಧಾರವಾಡದ ಸಿತಾರ್ ವಾದಕ ಮೊಹಸಿನ್ ಖಾನ್ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಿಂದೂಸ್ಥಾನಿ ಶಾಸ್ತ್ರೀಯ ಗಾಯಕ ವಿಶಾಲ ಹೆಗಡೆ ಆಯ್ಕೆಯಾಗಿದ್ಧಾರೆ.