ನವಲಗುಂದ: ಬಹುದಿನಗಳಿಂದ ಸರ್ಕಾರ, ಪುರಸಭೆ ಜಾಗೆಯಲ್ಲಿ ವಾಸಿಸುತ್ತಿರುವ ಬಡ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದು ಎನ್.ಎಚ್.ಕೋನರಡ್ಡಿ ಹೇಳಿದರು.

ಅವರು ಮಂಗಳವಾರ ಸ್ಥಳೀಯ ಹುಗ್ಗಿಯವರ ಓಣಿ ಹತ್ತಿರ ಇರುವ ಗುಡ್ಡದ ಮೇಲಿನ ನಿವಾಸಿಗಳಿಗೆ ಜೊತೆ ಚರ್ಚಿಸಿ ನಂತರ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡು ಮನೆ ಕಟ್ಟಿ ಬಹಳ ವರ್ಷಗಳಿಂದ ವಾಸಿಸುತ್ತಿರುವ ಬಡ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ಕೊಡುವ ಭಾಗ್ಯ ಸಿಕ್ಕಿದ್ದು, ಹಲವು ವರ್ಷಗಳಿಂದ ಮನೆಗಳನ್ನು ಕಟ್ಟುಕೊಂಡಿರುವಂತಹ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಸರ್ಕಾರದ ಮಹತ್ವದ ಯೋಜನೆಯಾಗಿದೆ.

ಅಲ್ಲದೇ ನನ್ನ ವಿಧಾನಸಭಾ ಕ್ಷೇತ್ರದ ಮುಂತಾದ ಗ್ರಾಮಗಳಲ್ಲಿ ಸರ್ಕಾರ ಹಾಗೂ ಖಾಸಗಿ ಜಾಗೆಯಲ್ಲಿ ವಾಸವಿರುವ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡುವುದರಿಂದ ಸರ್ಕಾರದ ವಿವಿಧ ಯೋಜನೆ ಹಾಗೂ ಬ್ಯಾಂಕ್ನಿಂದ ಆರ್ಥಿಕ ಸಹಾಯ ಪಡೆಯಲು ಅನುಕೂಲವಾಗಲಿದೆ ಎಂದು ಕೋನರಡ್ಡಿ ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಎಸ್.ಪಿ.ಪೂಜಾರ, ಮಾಜಿ ಪುರಸಭೆ ಸದಸ್ಯರಾದ ಜೀವನ ಪವಾರ, ವೆಂಕಟೇಶ ಗೊಲ್ಲರ, ಕಾಶೀಂ ಸಾಬ್ ಜಮಖಾನ, ಪರಸು ಗೊಲ್ಲರ, ಮಲ್ಲಪ್ಪ ರಾಯಬಾಗಿ, ಮೆಹಬೂಬ ಅಸ್ತಗಿ, ರಾಮು ಗೊಲ್ಲರ, ಶಿವಣ್ಣ ದೋತಾರಿ, ನವೀನ ಹೊಸಗೌಡ್ರ, ಮಾರುತಿ ಗೊಲ್ಲರ, ಶಿವು ಬೆಂಡಿಗೇರಿ, ಬಸವರಾಜ ಹಾಡೀನ, ಬಾಬು ಹುಗ್ಗಿ, ಬಸವರಾಜ ಬನ್ನೆಣ್ಣವರ, ಬುಡ್ಡಾಸಾಬ್ ರೋಣದ ಮುಂತಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.