ಹುಬ್ಬಳ್ಳಿ: ‘ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಪ್ರಸ್ತುತ ವರ್ಷ ಆಕಾಶ ಎಜ್ಯುಕೇಷನಲ್ ಸರ್ವೀಸಸ್ ಲಿಮಿಟೆಡ್ನ ವಿದ್ಯಾರ್ಥಿಗಳಾದ ದಕ್ಷ ಎಸ್.ಆರ್. ಮತ್ತು ದೈವಿಕ್ ಅಂಬಾಟಿ ಅವರು ಆಲ್ ಇಂಡಿಯಾ ರ್ಯಾಂಕಿಂಗ್ನಲ್ಲಿ ಕ್ರಮವಾಗಿ 318 (626/720) ಮತ್ತು 513 (618/720) ನೇ ಸ್ಥಾನ ಪಡೆದಿದ್ದಾರೆ’ ಎಂದು ಆಕಾಶ ಎಜ್ಯುಕೇಷನ್ ಸಹ ನಿರ್ದೇಶಕ ಡಿ.ರವಿಕುಮಾರ ತಿಳಿಸಿದರು.

ರ್ಯಾಂಕ್ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ನಗರದ ಆಕಾಶ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದ ಮೊದಲ 100 ರ್ಯಾಂಕ್ಗಳಲ್ಲಿ ಆಕಾಶ ಎಜ್ಯುಕೇಷನ್ ಸಂಸ್ಥೆಯ 29 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಬದ್ಧತೆ, ಶೈಕ್ಷಣಿಕ ಶಿಸ್ತು, ಉತ್ತಮ ತರಬೇತಿ ಮತ್ತು ಮಾರ್ಗದರ್ಶನದಿಂದ ಈ ಫಲಿತಾಂಶ ಸಿಕ್ಕಿದೆ’ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿಗಳಾದ ದೈವಿಕ್ ಮತ್ತು ದಕ್ಷ ಅನುಭವ ಹಂಚಿಕೊಂಡಿರು. ‘ಶೈಕ್ಷಣಿಕ ವಿದ್ಯಾಭ್ಯಾಸ ಮಾಡುತ್ತಲೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಆಕಾಶ ಕಲಿಸಿಕೊಟ್ಟಿತ್ತು. ಇಲ್ಲಿರುವ ನುರಿತ ಶಿಕ್ಷಕರ ಮಾರ್ಗದರ್ಶನ ಹಾಗೂ ಸಂದೇಹಗಳಿಗೆ ದೊರೆಯುತ್ತಿದ್ದ ತಕ್ಷಣ ಪರಿಹಾರ ನಿರಂತರ ಓದಿಗೆ ಸಹಾಯವಾಯಿತು. ಸಮಯ ಸಿಕ್ಕಾಗಲೆಲ್ಲ ಓದುತ್ತ, ಅಂದಿನ ಅಭ್ಯಾಸವನ್ನು ಅಂದೇ ಮುಗಿಸುತ್ತಿದ್ದೇವು. ನೀಟ್ ಬಗ್ಗೆ ಭಯ ಪಡದೆ, ಗುರಿ ಇಟ್ಟುಕೊಂಡು ಪರೀಕ್ಷೆಗೆ ಸಿದ್ಧರಾಗಬೇಕು’ ಎಂದು ಹೇಳಿದರು.

ಆಕಾಶ ಸಂಸ್ಥೆಯ ಅನಿಲಕುಮಾರ ಎಚ್.ಆರ್.ಟಿ. ವೆಂಕಟೇಶ್ವರಲು, ವಿ.ಎಲ್.ಲಿಂಗಾರೆಡ್ಡಿ, ವಿಜಯ ಮಹಾಂತೇಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.