‘ಶಕ್ತಿ ಯೋಜನೆ’ ವೆಚ್ಚದ ಮೊತ್ತ ಬಾಕಿ
ಶಕ್ತಿ ಯೋಜನೆ ಅನುಷ್ಠಾನಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಾಜ್ಯ ಸರ್ಕಾರದಿಂದ ಬರಬೇಕಾದ ಒಟ್ಟು ಬಾಕಿ ₹559 (ಶೇ 21) ಕೋಟಿಯಷ್ಟಿದೆ. 2023–24ನೇ ವರ್ಷದ್ದು ₹283 ಕೋಟಿ ಮತ್ತು 2024–25ನೇ ಸಾಲಿನದ್ದು ₹276 ಕೋಟಿ ಬಾಕಿ ಉಳಿದಿದೆ. ಶಕ್ತಿ ಯೋಜನೆ ಜಾರಿಯಾದ ದಿನದಂದ ಕಳೆದ ಮಾರ್ಚ್ 31ರವರೆಗೂ ಸರ್ಕಾರವು ಸಂಸ್ಥೆಗೆ ಒಟ್ಟು ₹2584 ಕೋಟಿ ಕೋಟಿ ಕೊಡಬೇಕಿತ್ತು.ಆ ಪೈಕಿ ಒಟ್ಟು ₹2024 (ಶೇ 79) ಕೋಟಿಯಷ್ಟು ಹಣವನ್ನು ಸಂಸ್ಥೆಗೆ ಬಿಡುಗಡೆ ಮಾಡಿದೆ.