ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಮನೆಗೇ ಕನ್ನ ಹಾಕಿದ ಚಾಲಾಕಿ ಕಳ್ಳರು!

ಹಳೇ ಸಿಎಆರ್‌ ಮೈದಾನದ ಬಳಿ ಇರುವ ಹೊಸ ಪೊಲೀಸ್‌ ವಸತಿಗೃಹ
Last Updated 18 ಫೆಬ್ರುವರಿ 2019, 13:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಕಾರವಾರ ರಸ್ತೆಯ ಹಳೇ ಸಿಎಆರ್‌ ಮೈದಾನದ ಬಳಿ ಇರುವ ನೂತನ ಪೊಲೀಸ್‌ ವಸತಿಗೃಹದ ಎರಡು ಮನೆಗಳ ಬಾಗಿಲು ಮುರಿದ ಕಳ್ಳರು ₹ 5.15 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಭಾನುವಾರ ರಾತ್ರಿ ಕಳ್ಳತನ ಮಾಡಿದ್ದಾರೆ.

ಬ್ಲಾಕ್‌ ನಂ 7ರ 73ನೇ ಸಂಖ್ಯೆಯ ಮನೆಯಲ್ಲಿ ಎಆರ್‌ಎಸ್‌ಐ ಆಗಿರುವ ಮಹಾಂತೇಶ ಹೊಸಮನಿ ಎಂಬುವವರ ಮನೆಗೆ ನುಗ್ಗಿದ ಕಳ್ಳರು ₹ 2,77 ಲಕ್ಷ ಮೊತ್ತದ 113 ಗ್ರಾಂ ಚಿನ್ನಾಭರಣ, ₹ 13,700 ಕಿಮ್ಮತ್ತಿನ 540 ಗ್ರಾಂ ಬೆಳ್ಳಿಯ ಆಭರಣ ಹಾಗೂ ₹ 84 ಸಾವಿರ ನಗದು ಸೇರಿದಂತೆ ₹ 3,74,700 ಮೌಲ್ಯದ ವಸ್ತು ಹಾಗೂ ನಗದು ಕದ್ದುಕೊಂಡು ಪರಾರಿಯಾಗಿದ್ದಾರೆ.

6ನೇ ಬ್ಲಾಕ್‌ನ 69ನೇ ಸಂಖ್ಯೆಯ ಮನೆಯಲ್ಲಿ ಪೊಲೀಸ್‌ ಸಿಬ್ಬಂದಿ ಮಲ್ಲಿಕಾರ್ಜುನ ಕುಡುವಕ್ಕಲ ಎಂಬುವವರಿಗೆ ಸೇರಿದ 42 ಗ್ರಾಂ ತೂಕದ, ₹ 1,26 ಲಕ್ಷ ಮೌಲ್ಯದ ಚಿನ್ನಾಭರಣ, 360 ಗ್ರಾಂ ತೂಕದ ₹ 14,400 ಮೌಲ್ಯದ ಬೆಳ್ಳಿ ಆಭರಣ ಸೇರಿದಂತೆ ₹ 1,40,400 ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT