ಹುಬ್ಬಳ್ಳಿ: ಬ್ಯಾಂಕ್ ನೌಕರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಲಭಿಸಬೇಕಾದರೆ ಸಂಘಟಿತ ಪ್ರಯತ್ನ ಅಗತ್ಯ ಎಂದು ಕೆನರಾ ಬ್ಯಾಂಕ್ ನೌಕರರ ಸಂಘಟನೆಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಸಂಗ್ಟಾನಿ ಹೇಳಿದರು.

ನಗರದಲ್ಲಿ ಇತ್ತೀಚೆಗೆ ಕೆನರಾ ಬ್ಯಾಂಕ್ ವರ್ಕ್‌ಮನ್ ಎಂಪ್ಲಾಯಿಜ್ ಯೂನಿಯನ್ ಹುಬ್ಬಳ್ಳಿಯ ಘಟಕದ ವತಿಯಿಂದ ನಡೆದ ರಾಜ್ಯಮಟ್ಟದ ನೌಕರರ ಸಮಾವೇಶ ಉದ್ಘಾಟಿಸಿ ಮಾತನಾಡಿ ’ನೌಕರರ ಸಂಘಟನೆಯನ್ನು ಬಲವರ್ಧನೆಗೊಳಿಸಲು ಅಗತ್ಯವಿದೆ. ಈ ದಿಸೆಯಲ್ಲಿ ನೌಕರರು ಸಂಘಟಿತ ಮನೋಭಾವನೆ ಬೆಳೆಸಿಕೊಳ್ಳಬೇಕು‘ ಎಂದರು.

ಡೆಪ್ಯೂಟಿ ಪ್ರಧಾನ ಕಾರ್ಯದರ್ಶಿ ಎಸ್. ಮುನಾವರ ಪಾಷಾ ’ಸಂಘಟಿತ ಪ್ರಯತ್ನದಿಂದ ಮಾತ್ರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ‘ ಎಂದು ಅಭಿಪ್ರಾಯಪಟ್ಟರು. ವಿವಿಧ ಭಾಗಗಳಿಂದ ಸುಮಾರು 200 ಜನ ನೌಕರ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ನಿವೃತ್ತಿ ಹೊಂದಿದ ನಿಕಟಪೂರ್ವ ಕೇಂದ್ರ ಸಮಿತಿ ಕಾರ್ಯದರ್ಶಿ ಜಗದೀಶ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಸಮಿತಿ ಕಾರ್ಯದರ್ಶಿ ಎಚ್. ವೆಂಕಟೇಶ, ವಿದ್ಯಾ ನಾಯಕ, ಎಚ್.ಎಸ್. ಸ್ವಾಮಿ, ದೇವೇಂದ್ರಪ್ಪ, ಗಂಗಾಧರ ಹುಟಗಿಕರ, ಜಯಲಕ್ಷ್ಮಿ, ಸಂಘಟನೆಯ ಪದಾಧಿಕಾರಿಗಳಾದ ಜಗದೀಶ ಶೆಟ್ಟಿ, ಅರುಣಕುಮಾರ, ಗೋವಿಂದರಾವ, ವಿದ್ಯಾ ನಾಯಕ, ಬಿ.ಆರ್. ಪ್ರಕಾಶ, ಎಸ್. ಭಗವಾನ, ಟಿ.ವೈ. ಹಬೀಬ, ರಾಜ್ಯ ಸಮಿತಿ ಚೇರ್ಮನ್, ಸಿ.ಎಂ. ಚನ್ನಬಸಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.