ಪಾಲಿಕೆ ವಲಯ ಕಚೇರಿ ಎದುರು ಪೌರ ಕಾರ್ಮಿಕರ ಪ್ರತಿಭಟನೆ

7
ಮೈಗಳ್ಳರನ್ನು ಕೆಲಸದಿಂದ ವಜಾ ಮಾಡಲು ಆಗ್ರಹ

ಪಾಲಿಕೆ ವಲಯ ಕಚೇರಿ ಎದುರು ಪೌರ ಕಾರ್ಮಿಕರ ಪ್ರತಿಭಟನೆ

Published:
Updated:

ಹುಬ್ಬಳ್ಳಿ:  ಕೆಲಸ ಮಾಡದ ಮೈಗಳ್ಳರನ್ನು ಕೆಲಸದಿಂದ ತೆಗೆಯಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಸದಸ್ಯರು ಹಳೆ ಹುಬ್ಬಳ್ಳಿಯ ಪಾಲಿಕೆ ವಲಯ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ವಯಯ 10ರಲ್ಲಿ ಒಟ್ಟು 9 ವಾರ್ಡ್‌ಗಳಿವೆ. ಈ ಭಾಗದ ಸ್ವಚ್ಛತಾ ಕೆಲಸದಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ಅದರೆ ಕೆಲವರು ಕೇವಲ ಬಯೋಮೆಟ್ರಿಕ್ ಮೂಲಕ ಹಾಜರಾತಿ ಹಾಕಿ ಕೆಲಸ ಮಾಡದೆ ಸಂಬಳ ಪಡೆಯುತ್ತಿದ್ದಾರೆ. ಅಂತಹವರಿಂದ ಪ್ರಾಮಾಣಿಕ ಕೆಲಸಗಾರರಿಗೆ ಹೊರೆ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಈ ಸಮಸ್ಯೆ ನೆನ್ನೆ ಮೊನ್ನೆಯದಲ್ಲ, 2009ರಿಂದಲೂ ಈ ಬಗ್ಗೆ ಪಾಲಿಕೆಗೆ ದೂರು ನೀಡಲಾಗುತ್ತಿದೆ. ಅದರೆ ಕೆಲಸ ಮಾಡದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ‘ಕೆಲಸ ಮಾಡಲಿ ಬಿಡಲಿ ನಿಮಗೇನು’ ಎಂದು ನಮ್ಮನ್ನೇ ಪ್ರಶ್ನಿಸುತ್ತಿದ್ದಾರೆ. ನಿರ್ದಿಷ್ಟ ವಾರ್ಡ್‌ನಲ್ಲಿ ಇಂತಿಷ್ಟು ಪೌರ ಕಾರ್ಮಿಕರು ಇದ್ದಾರೆ ಎಂದು ತೋರಿಸುವುದು ಅನಿವಾರ್ಯ. ಆದ್ದರಿಂದ ಕೆಲವರನ್ನು ಕೆಲಸದಿಂದ ವಜಾ ಮಾಡಿದರೆ ತೊಂದರೆ ಆಗುತ್ತದೆ ಎನ್ನುತ್ತಿದ್ದಾರೆ. ಪರಿಣಾಮ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ ಎಂದು ಅವರು ಹೇಳಿದರು.

ಇಂತಹ ನಕಲಿ ಕಾರ್ಮಿಕರಿಂದಾಗಿ ಶ್ರಮ ಜೀವಿಗಳ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆ ಸಹ ಇದೆ. ಸಹಾಯಕ ಆಯುಕ್ತ ಎ. ವೈ. ಕಾಂಬಳೆ ಅವರು ಈ ಬಗ್ಗೆ ಈಗಲಾದರೂ ಕ್ರಮ ಕೈಗೊಳ್ಳಬೇಕು. ಬಡ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕಾಂಬಳೆ, ಯಾರು ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿ, ನಿಮ್ಮ ಒಂದೊಂದು ತಂಡದಲ್ಲಿ ಅಂತಹ ನಾಲ್ವರನ್ನು ಬಿಡಲಾಗುವುದು. ಆಗ ಅವರು ಕೆಲಸ ಮಾಡಲೇಬೇಕಾಗುತ್ತದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !