ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಲೈನ್‌ನಲ್ಲಿ ಸಂಚರಿಸಿದ ಜನಶತಾಬ್ದಿ ರೈಲು

ಹುಬ್ಬಳ್ಳಿ– ಬೆಂಗಳೂರು– ಹುಬ್ಬಳ್ಳಿ ರೈಲು
Published 20 ಜುಲೈ 2023, 14:24 IST
Last Updated 20 ಜುಲೈ 2023, 14:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ– ಬೆಂಗಳೂರು ಮಾರ್ಗ ಸಂಪೂರ್ಣ ವಿದ್ಯುದ್ದೀಕರಣಗೊಂಡಿದ್ದು, ಹುಬ್ಬಳ್ಳಿ– ಬೆಂಗಳೂರು– ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ವಿದ್ಯುತ್‌ ಲೈನ್‌ನಲ್ಲಿ ಬುಧವಾರದಿಂದ ಸಂಚಾರ ಆರಂಭಿಸಿದೆ. 

ವಿದ್ಯುದ್ದೀಕರಣಗೊಳ್ಳುವ ಮೊದಲು ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ಡೀಸೆಲ್‌ನಿಂದ ಸಂಚರಿಸುತ್ತಿತ್ತು. ಈಗ ವಿದ್ಯುದ್ದೀಕರಣಗೊಂಡಿದ್ದರಿಂದ ಪರಿಸರ ಮಾಲಿನ್ಯ ಕಡಿಮೆಯಾಗಿದೆ. ಅಲ್ಲದೇ, ಡೀಸೆಲ್‌ಗೆ ತಗಲುತ್ತಿದ್ದ ದುಬಾರಿ ವೆಚ್ಚವು ಕಡಿಮೆಯಾಗಲಿದೆ ಎಂದು ನೈರುತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಸ್‌ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು. 

ದೇಶದ ಎಲ್ಲ ರೈಲು ಮಾರ್ಗಗಳನ್ನು 2030ರೊಳಗೆ ವಿದ್ಯುದ್ಧೀಕರಣ ಮಾಡಲು ರೈಲ್ವೆ ಇಲಾಖೆ ಗುರಿ ಇಟ್ಟುಕೊಂಡಿದೆ. ಅದರ ಭಾಗವಾಗಿ ನೈರುತ್ಯ ವಲಯದಲ್ಲೂ ವಿದ್ಯುದ್ದೀಕರಣ ಮಾಡಲಾಗುತ್ತಿದೆ. ಕಳೆದ ವರ್ಷ 874 ಕಿ.ಮೀ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಲಾಗಿದೆ. ಇದರೊಳಗೆ ಹುಬ್ಬಳ್ಳಿ– ಬೆಂಗಳೂರು ಮಾರ್ಗವೂ ಸೇರಿದೆ. ವಂದೇ ಭಾರತ್‌ ರೈಲು ಕೂಡ ಇದೇ ವಿದ್ಯುತ್‌ ಲೈನ್‌ ಮೇಲೆ ಸಂಚರಿಸುತ್ತಿದೆ ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT