ಹುಬ್ಬಳ್ಳಿ: 46 ಮನೆಗಳು ಕುಸಿತ
ಹುಬ್ಬಳ್ಳಿ: ಗುರುವಾರ ಮತ್ತು ಶುಕ್ರವಾರ ಸುರಿದ ನಿರಂತರ ಮಳೆಗೆ ತಾಲ್ಲೂಕಿನ ನಗರ ಪ್ರದೇಶದಲ್ಲಿ ಎಂಟು ಮನೆಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ 38 ಮನೆಗಳು ಕುಸಿದಿವೆ.
ಶನಿವಾರ ಬೆಳಿಗ್ಗೆ ಹೊತ್ತು ಮಾತ್ರ ಅರ್ಧ ಗಂಟೆ ಸಾಧಾರಣ ಮಳೆ ಸುರಿಯಿತು. ಆದ್ದರಿಂದ ತಾಲ್ಲೂಕಿನ ಮಂಟೂರು, ಭಂಡಿವಾಡ, ನಾಗರಹಳ್ಳಿ ಗ್ರಾಮಗಳಲ್ಲಿ ಹೊಲಗಳಿಗೆ ನುಗ್ಗಿದ ನೀರು ಇಳಿಮುಖವಾಗಿದೆ. ಮನೆಗೆ ನುಗ್ಗಿದ್ದ ನೀರನ್ನು ಹೊರಹಾಕುವ ಹಾಗೂ ಸ್ವಚ್ಛಗೊಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನೇಕಾರನಗರ, ದೇಶಪಾಂಡೆನಗರ, ಆನಂದನಗರ, ಅಯೋಧ್ಯಾನಗರ, ಎಸ್.ಎಂ. ಕೃಷ್ಣನಗರ ಪ್ರದೇಶಗಳಲ್ಲಿ ತುಂಬಿ ಹರಿದ ಒಳಚರಂಡಿಯ ಮ್ಯಾನ್ ಹೋಲ್ಗಳನ್ನು ಪೌರಕಾರ್ಮಿಕರು ಶುಚಿಗೊಳಿಸಿದರು. ಪಾಲಿಕೆ ಕಂದಾಯ ವಿಭಾಗ ಹಾಗೂ ತಾಲ್ಲೂಕು ಆಡಳಿತ ಸಿಬ್ಬಂದಿ ಕುಸಿದ ಮನೆಗಳ ಸಮೀಕ್ಷೆ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.