ಧಾರವಾಡ: ಈ ವರ್ಷದ ಎರಡನೇ ಪೂರ್ಣ ಚಂದ್ರ ಗ್ರಹಣ ಶುಕ್ರವಾರ ರಾತ್ರಿ 11:54ರಿಂದ ಆರಂಭವಾಗಲಿದೆ. ಇದರ ವೀಕ್ಷಣೆಗೆ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಕಲ ಸಿದ್ಧತೆ ನಡೆಸಿದೆ.

ಅತ್ಯಂತ ದೀರ್ಘ ಕಾಲದ ‘ರಕ್ತ ಚಂದ್ರ’ನನ್ನು ಬರಿಗಣ್ಣಿನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಕಣ್ತುಂಬಿಕೊಳ್ಳುವ ಅವಕಾಶ ಇದಾಗಿದೆ. ನೂರು ವರ್ಷದ ನಂತರ ಆಗಸದಲ್ಲಿ ಇಂಥದ್ದೊಂದು ವಿಸ್ಮಯ ನಡೆಯುತ್ತಿದ್ದು, ನಗರದಲ್ಲೂ ಇದನ್ನು ನೋಡುವ ಖಗೋಳಾಸಕ್ತರಿಗಾಗಿ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಅವಕಾಶ ಕಲ್ಪಿಸಿದೆ.

ಈ ಕುರಿತು ಮಾಹಿತಿ ನೀಡಿದ ಕೇಂದ್ರ ನಿರ್ದೇಶಕ ಡಾ. ಕೆ.ಬಿ.ಗುಡಸಿ, ‘ಶುಕ್ರವಾರ ರಾತ್ರಿ 11.44ಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. ಭಾಗಶಃ ಗ್ರಹಣ ಕಾಲ 11:54ರಿಂದ ಆರಂಭವಾಗಲಿದೆ. ಪೂರ್ಣ ಗ್ರಹಣ ರಾತ್ರಿ 1ರಿಂದ ಆರಂಭವಾಗಲಿದೆ. ಗರಿಷ್ಠ ಪ್ರಮಾಣದ ಗ್ರಹಣ 1.54ಕ್ಕೆ ಆಗಲಿದೆ. ಬೆಳಿಗ್ಗೆ 2.43ಕ್ಕೆ ಪೂರ್ಣ ಚಂದ್ರಗ್ರಹಣ ಕೊನೆಗೊಳ್ಳಲಿದೆ. ಹೀಗಾಗಿ ಗ್ರಹಣದ ಪೂರ್ಣ ಪ್ರಕ್ರಿಯೆ 6ಗಂಟೆ 14 ನಿಮಿಷಗಳ ಕಾಲ ಇರಲಿದೆ’ ಎಂದು ತಿಳಿಸಿದರು.

‘ಆದರೆ ಈ ಬಾರಿ ಮಧ್ಯರಾತ್ರಿ ಗ್ರಹಣ ನಡೆಯುತ್ತಿರುವುದು ಒಂದೆಡೆಯಾದರೆ, ಮೋಡ ಕವಿದ ವಾತಾವರಣದಿಂದ ಗ್ರಹಣ ಗೋಚರಿಸುವುದು ಅನುಮಾನ. ಆದರೂ ಕೇಂದ್ರದಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಹಣ ನೋಡುವವರಿಗೆ ದೂರದರ್ಶಕ ಸಿದ್ಧಪಡಿಸಲಾಗಿದೆ. ಮೋಡದಿಂದ ಗ್ರಹಣ ಗೋಚರಿಸದಿದ್ದರೆ, ಬೇರೆಡೆ ನಡೆಯುವ ಗ್ರಹಣದ ಪೂರ್ಣ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಬೃಹತ್ ಪರದೆಯ ಮೇಲೆ ತೋರಿಸಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

ಕಳೆದ ಜ. 31ರಂದು ನಡೆದ ನೀಲಿ ಚಂದ್ರ, ಸೂಪರ್ ಮೂನ್ ಹಾಗೂ ರಕ್ತ ಚಂದ್ರನನ್ನು ನಗರದ ನೂರಾರು ಜನ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿದ್ದರು. ಆ ಗ್ರಹಣ 174 ವರ್ಷಗಳ (1844ರ ಮೇ 31ರಂದು) ನಂತರ ಭಾರತದಲ್ಲಿ ಗೋಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

‘ಧಾರ್ಮಿಕವಾಗಿ ಈ ಚಂದ್ರ ಗ್ರಹಣವು ಪ್ರಕೃತಿಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಲಿದೆ. ಭೂಕಂಪ, ಪ್ರವಾಹ, ಸುನಾಮಿಯಂಥ ಪ್ರಕೃತಿ ವಿಕೋಪ, ಯುದ್ಧದಂತ ಮಾನವ ವಿಕೋಪಗಳು ಸಂಭವಿಸುವ ಸಾಧ್ಯತೆ ಇದೆ’ ಎಂದು ಜ್ಯೋತಿಷಿ ಸುಹಾಸ ಜೋಗಳೇಕರ್ ತಿಳಿಸಿದರು.

‘ಧಾರ್ಮಿಕವಾಗಿ ನಂಬಿಕೆಯುಳ್ಳ ಸದೃಢರು ಮಧ್ಯಾಹ್ನ 2ರೊಳಗೆ ಆಹಾರ ಸೇವಿಸಬೇಕು. ಗರ್ಭಿಣಿಯರು, ಅಶಕ್ತರು, ವೃದ್ಧರು ಮತ್ತು ರೋಗಿಗಳು ಸಂಜೆ 5.30ರ ನಂತರ ಆಹಾರ ಸೇವಿಸಬಾರದು. ಗರ್ಭಿಣಿಯರು ಗ್ರಹಣ ನೋಡಬಾರದು. ಗ್ರಹಣ ಕಾಲದಲ್ಲಿ ಮಲಗಬಾರದು, ನೀರನ್ನೂ ಕುಡಿಯಬಾರದು. ಜಪ ಮಾಡಿ ಗ್ರಹಣ ಕಾಲ ಕಳೆಯಬೇಕು’ ಎಂದರು.

‘ಮೇಷ, ಸಿಂಹ, ವೃಶ್ಚಿಕ, ಮೀನಾ ರಾಶಿಯವರಿಗೆ ಶುಭಫಲ, ವೃಷಭ, ಕರ್ಕಾಟಕ, ಕನ್ಯಾ, ಧನಸು ರಾಶಿಯವರಿಗೆ ಮಿಶ್ರಫಲ, ಮಿಥುನ, ತುಲಾ, ಮಕರ, ಕುಂಭ ರಾಶಿಯವರಿಗೆ ಅಶುಭಫಲ ಇದೆ. ಇಂಥವರು ಶಾಂತಿ ಮಾಡಿಸುವುದು, ಅಕ್ಕಿ ಹಾಗೂ ಬಿಳಿ ವಸ್ತ್ರ, ಬೆಳ್ಳಿಯ ಚಂದ್ರನ ಬಿಂಬ, ಹುರಳಿಯನ್ನು ಧಾನವಾಗಿ ನೀಡಬಹುದು’ ಎಂದು ಸುಹಾಸ ತಿಳಿಸಿದರು.

ಪ್ರಗತಿಪರ ಚಿಂತಕರು ಈ ಬಾರಿ ಗ್ರಹಣ ಕಾಲದಲ್ಲೂ ಎರಡುಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಡಾ. ಸಂಜೀವ ಕುಲಕರ್ಣಿ, ಶಂಕರ ಹಲಗತ್ತಿ ಇತರರು ಸೇರಿ ಸಂಜೆ 6.30ರಿಂದ ಅಡುಗೆ ಕಾರ್ಯಕ್ರಮವನ್ನು ಇಲ್ಲಿನ ಕಲಾಭವನ ಆವರಣದಲ್ಲಿ ಹಮ್ಮಿಕೊಂಡಿದ್ದಾರೆ. ಜತೆಗೆ ಗ್ರಹಣ ಕಾಲವಾದ ರಾತ್ರಿ 12ರ ಹೊತ್ತಿಗೂ ಹಲವು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.