ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ ಸಡಗರ, ಅಂಬೇಡ್ಕರ್‌ ಸ್ಮರಣೆ

Last Updated 27 ಜನವರಿ 2022, 6:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗಣರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ಬುಧವಾರ ವಿವಿಧ ಸಂಘ ಸಂಸ್ಥೆ, ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣ ನಡೆಯಿತು. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ಸ್ಮರಿಸಲಾಯಿತು.

ವಾಣಿಜ್ಯೋದ್ಯಮ ಸಂಸ್ಥೆ: ಸಂಸ್ಥೆಯ ಅಧ್ಯಕ್ಷ ವಿಜಯ ಜೆ. ಜವಳಿ ಧ್ವಜಾರೋಹಣ ಮಾಡಿದರು.

ಪದಾಧಿಕಾರಿಗಳಾದ ಶಂಕರ ಕೋಳಿವಾಡ, ಶಂಕರಣ್ಣ ಮುನವಳ್ಳಿ, ರಮೇಶ ಎ. ಪಾಟೀಲ, ಮಹೇಂದ್ರ ಲದ್ದಡ, ಅಶೋಕ ತೋಳನವರ, ಅಚ್ಯುತ ಲಿಮಯೆ, ಅಶೋಕ ಲದವಾ, ಡಿ.ಕೆ ಶ್ರೀನಾಥ ಸಿ.ಎನ್.ಕರಿಕಟ್ಟಿ, ವೀರಣ್ಣ ಕಲ್ಲೂರ, ಎಫ್ ಸಿ. ಭೂಸದ, ವಿದ್ಯಾಧರ ಯಲಗಚ್ಛ, ಅಶೋಕ ಗಡಾದ, ರಾಜೇಶ ಕೋಲೆಕರ, ಬಸವರಾಜ ಎಕಲಾಸಪೂರ, ಪ್ರಕಾಶ ಶೃಂಗೇರಿ, ಮೋಹನ ಸವಣೂರ ಇದ್ದರು.

ಸೇನೆ: ಕರ್ನಾಟಕ ನವನಿರ್ಮಾಣ ವೇದಿಕೆಯಿಂದ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಈರಪ್ಪ ಎಮ್ಮಿ, ಗುರುನಾಥ ಗಾರವಾಡ, ಗುರುರಾಜ ಕಾರಡಗಿ, ಮಾರುತಿ ಗಾರವಾಡ, ಬಸವಂತಪ್ಪ ಮಾದರ, ಧಮು೯ ಗುಡಿ, ನೀಲಕಂಠ ತಡಸದಮಠ ಇದ್ದರು.

ಕೆಎಲ್‌ಇ ಕಾಲೇಜು: ಗೋಕುಲ ರಸ್ತೆಯ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಬಸವರಾಜ ಅನಾಮಿ ಧ್ವಜಾರೋಹಣ ಮಾಡಿದರು. ಕಾಲೇಜಿನ ಡೀನ್ ಡಾ.ಶರದ್ ಜೋಶಿ, ಆನಂದ್ ಮಣ್ಣಿಕೇರಿ, ವಿದ್ಯಾರ್ಥಿಗಳಾದ ಪ್ರೇರಣಾ ಮತ್ತು ರಾಹುಲ್ ಇದ್ದರು.

ಮಹಿಳಾ ಕಾಲೇಜು: ಸಂವಿಧಾನದ ಆಶಯದಂತೆ ದೇಶದ ಏಳ್ಗೆಗೆ ಶ್ರಮಿಸಬೇಕು ಎಂದು ಶಿಗ್ಗಾವಿಯ ಎಸ್‌ಆರ್‌ಜೆವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಡಿ.ಎ. ಗೊಬ್ಬರಗುಂಪಿ ಹೇಳಿದರು.

ಇಲ್ಲಿನ ಎಸ್‌ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಅವರು ಮಾತನಾಡಿದರು.

ಗಣರಾಜ್ಯೋತ್ಸವ ಕುರಿತು ವಿದ್ಯಾರ್ಥಿಗಳಾದ ಶ್ರದ್ಧಾ ಕೆ.ಪಿ., ಪ್ರೇರಣಾ ಜಾಧವ ಹಾಗೂ ಪ್ರೀತಿ ಹಿರೇಮಠ ಮಾತನಾಡಿದರು. ಇತಿಹಾಸ ವಿಭಾಗದ ಪ್ರೊ. ಶಾರದಾ ಬಡಿಗೇರ, ಪ್ರಾಚಾರ್ಯ ಡಾ. ಲಿಂಗರಾಜ ಅಂಗಡಿ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಅನುರಾಧಾ ಹೊಸಕೋಟೆ, ಡಾ. ಸಿಸಿಲಿಯಾ ಡಿಕ್ರೊಜ್, ಡಾ. ಜ್ಯೋತಿಲಕ್ಷ್ಮಿ ಡಿ.ಪಿ. ಇದ್ದರು.

ಶಾಸಕರ ಮಾದರಿ ಶಾಲೆ: ಘಂಟಿಕೇರಿಯ ಶಾಸಕರ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.5ರ ಆವರಣದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಧ್ವಜಾರೋಹಣ ಮಾಡಿದರು.

ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಹುಬ್ಬಳ್ಳಿ ಶಹರ ಬಿಇಒ ಶ್ರೀಶೈಲ ಕರೀಕಟ್ಟಿ, ಶಿಕ್ಷಣ ಸಂಯೋಜಕ ಪ್ರಭಾಕರ, ಬಿ.ಆರ್.ಪಿ. ಬಾಬುನವರ, ಶಾಲೆಯ ಮುಖ್ಯ ಶಿಕ್ಷಕಿ ತೇಜಸ್ವಿನಿ ರೇವಡಿಗಾರ, ಎಸ್‌ಡಿಎಂಸಿ ಅಧ್ಯಕ್ಷೆ ಸವಿತಾ ದತ್ತವಾಡ, ಸಹ ಶಿಕ್ಷಕಿಯರಾದ ರೇಣುಕಾ ಅಸುಂಡಿ, ಸಿ.ಎಸ್. ಪೂಜಾರ್, ವಿನೋದ ಕುರುಬರ, ಸಾವಿತ್ರಿ ತಿರ್ಲಾಪುರ, ಪಿ.ಎಚ್. ನದಾಫ್, ಮಂಜುಳಾ ಚೋಳನ್ ಇತರರು ಇದ್ದರು.

ಹಳೇ ಹುಬ್ಬಳ್ಳಿ: ಸಿದ್ಧಾರೂಢ ನಗರದ ರೇವಣಸಿದ್ದೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ವಸತಿ ಪ್ರೌಢಶಾಲೆಯಲ್ಲಿ ಧ್ವಜಾರೋಹಣ ನಡೆಯಿತು. ನಾಗರಾಜ ದೊಡ್ಡಮನಿ, ಹೂಗಾರ,ಸಿದ್ದು ತೆಗ್ಗಿ, ಶ್ರೀ ಚನ್ನವೀರ ಹಿರೇಮಠ, ಚಿನ್ನಮ್ಮ ಕಾತರಕಿ, ಮಡಿವಾಳರ, ಕುಮಾರಸ್ವಾಮಿ ಹಿರೇಮಠ, ಮಂಜುನಾಥ ಕೆ. ಢಾಲಾಯತರ, ಪರಮೇಶ್ವರ ಗುರುನಾಥಪ್ಪ ಬೈನವರ ಪಾಲ್ಗೊಂಡಿದ್ದರು.

ಮಹಾವೀರ ಶಿಕ್ಷಣ ಸಂಸ್ಥೆ: ರಾಜ ನಗರದ ಮಹಾವೀರ ಶಿಕ್ಷಣ ಸಂಸ್ಥೆಯ ಶಾ ಡಿ ಜೆ ಛೇಡಾ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ರತ್ನಪಾಲ್ ಶೆಟ್ಟಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕ ಪಿ.ಎಸ್. ಧರಣೆಪ್ಪನವರ ಧ್ವಜಾರೋಹಣ ನೆರವೇರಿಸಿದರು.

ಸಂಸ್ಥೆಯ ಅಧ್ಯಕ್ಷ ಎಸ್.ಕೆ. ಆದಪ್ಪನವರ, ಪದಾಧಿಕಾರಿಗಳಾದ ಆರ್.ಟಿ ಅಣ್ಣಿಗೇರಿ, ಆರ್.ಟಿ. ತವನಪ್ಪನವರ, ಎ.ಎಂ. ಶೆಟ್ಟಪ್ಪನವರ, ಎ.ಸಿ. ಬೀಳಗಿ, ಐಟಿಐ ಕಾಲೇಜಿನ ಚೇರ್ಮನ್ ಎಸ್.ಎ. ಕುಸನಾಳೆ, ಐಟಿಐ ಪ್ರಾಚಾರ್ಯ ರವಿ ಸಾಬಣ್ಣವರ, ಪಿಯು ಕಾಲೇಜಿನ ಪ್ರಾಚಾರ್ಯ ಲೋಹಿತ್ ಸರ್ಜನ್, ರವಿ ಕೋಟಿ, ಚೇತನ ಪತ್ರಾವಳಿ, ಸುಜಾತ ನಲವಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT