ಹುಬ್ಬಳ್ಳಿ: ‘ಇಲ್ಲಿನ ರುದ್ರಾಕ್ಷಿ ಮಠದಲ್ಲಿ ಸಮುದಾಯ ಭವನ ಮತ್ತು ಯಾತ್ರಿ ನಿವಾಸ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹1 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ ಸಲ್ಲಿಸಬೇಕು’ ಶಾಸಕ ಪ್ರಸಾದ ಅಬ್ಬಯ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಗಳವಾರಪೇಟೆಗೆ ಹೊಂದಿಕೊಂಡಿರುವ ರುದ್ರಾಕ್ಷಿ ಮಠದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಡಿ ಪೇವರ್ಸ್ (ನೆಲಹಾಸು) ಅಳವಡಿಕೆ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ನಮ್ಮ ಭಾಷೆ, ಸಂಸ್ಕೃತಿ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ರುದ್ರಾಕ್ಷಿ ಮಠಕ್ಕೆ ಭವ್ಯ ಇತಿಹಾಸ ಇದ್ದು, ಮಠದ ಪೀಠಾಧಿಪತಿ ಬಸವಲಿಂಗ ಸ್ವಾಮೀಜಿ ಎಂದೂ ಅನುದಾನ ಕೇಳಿಲ್ಲ. ಆದರೆ, ಮಠದ ಶ್ರೇಯೋಭಿವೃದ್ಧಿ ನಮ್ಮ ಕರ್ತವ್ಯವಾಗಿದ್ದು, ಮೊದಲ ಹಂತದಲ್ಲಿ ಯಾತ್ರಿ ನಿವಾಸ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದರು.

‘ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಜನರು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜನಿಯರ್ ಮೇಘಾ ವಿ.ಢಗೆ, ಮುಖಂಡರಾದ ರಜನಿಕಾಂತ ಬಿಜವಾಡ, ವಿಜಯಕುಮಾರ ಕುಂದನಹಳ್ಳಿ, ಮಹಾಂತೇಶ ಗಿರಿಮಠ, ಯಲ್ಲಪ್ಪ ಮಡಿವಾಳ, ಚೈತನ್ಯ ಬಿಜವಾಡ, ಕಾಶಪ್ಪ ಬಿಜವಾಡ, ಬಸವರಾಜ ಕುಸುಗಲ್, ರಾಹುಲ್ ಬೆಳದಡಿ, ಆರೀಫ್ ದೊಡ್ಡಮನಿ, ಅನೀಸ್ ನಾಯಕ್, ಸಮಿವುಲ್ಲಾ, ರಮೇಶ ಸಿಂಧಗಿ, ನೀಲಕಂಠ ಕರಪಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.