ನವಲಗುಂದ: ‘ಆಧುನಿಕತೆಯ ಸೋಗಿನಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಹಸು ಸಾಕಾಣಿಕೆ ಅಳವಡಿಸಿಕೊಂಡು ರೈತಾಪಿವರ್ಗ ಬೆಳೆಸುವ ಜವಾಬ್ದಾರಿ ರೈತರಿಗಿದೆ’ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ತಾಲ್ಲೂಕಿನ ಮೊರಬ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಹುಬ್ಬಳ್ಳಿ ಭೈರಿದೇವರಕೊಪ್ಪ ಗೆಳೆಯರ ಬಳಗದ ವತಿಯಿಂದ ಸೋಮವಾರ ಆಯೋಜಿಸಿದ್ದ ಧಾರವಾಡ, ಗದಗ, ಹಾವೇರಿ ರೈತರ ಜೋಡೆತ್ತಿನ ಚಕ್ಕಡಿ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿ, ಉಣಕಲ್, ಅಮರಗೋಳ, ಭೈರಿದೇವರಕೊಪ್ಪ ಹಾಗೂ ಜಿಲ್ಲೆಯ ವಿವಿಧ ಕಡೆಯಿಂದ ಸ್ಪರ್ಧಿಗಳು ಬಂದಿದ್ದಾರೆ. ಸ್ಪರ್ಧೆ ಆರಂಭದ ವೇಳೆ ಶುಭ ಸಂಕೇತವಾಗಿ ಮಳೆ ಬಂದಿದ್ದು, ರೈತರ ಹುರುಪನ್ನು ಮತ್ತಷ್ಟು ಹೆಚ್ಚಿಸಿ ಗ್ರಾಮೀಣ ಕಲೆಗೆ ಪ್ರೋತ್ಸಾಹ ನೀಡಿದೆ’ ಎಂದರು.

ಸ್ಪರ್ಧೆಯ ನೇತೃತ್ವವನ್ನು ಹು–ಧಾ ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ ವಹಿಸಿದ್ದರು. ಬಸಣ್ಣ ಮಾಯ್ಕರ (ಬೆಲ್ಲದ), ಚಂದ್ರಪ್ಪ ಬೆಲ್ಲದ, ವೆಂಕಣ್ಣ ಕರಡ್ಡಿ, ಮಲ್ಲಿಕಾರ್ಜುನ ಕಾಲವಾಡ, ಶಿವಾನಂದ ಗಾಳಿ, ಸದಾನಂದ ವಾಲಿಕಾರ, ಮಂಜುನಾಥ ಗುಡ್ಡಪ್ಪನವರ, ಗ್ರಾಮ ಪಂಚಾಯಿತಿ ಸದಸ್ಯರಾದ ಮಧುಮತಿ ರಾಯನಗೌಡ್ರ, ಗಿರಿಯಪ್ಪ ಮಾಸ್ತಿ, ಮಕ್ಬುಲ್ ಮುಲ್ಲಾ, ಬಸವರಾಜ ಗಬ್ಬೂರ, ಮುತ್ತು ನಾಶಿಪುಡಿ, ಶಿವಾನಂದ ಮಾನೆ, ಬಸವರಾಜ ಹಿಂಡಸಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.