ಸೋಮವಾರ, ಏಪ್ರಿಲ್ 19, 2021
31 °C

ಸಾರಿಗೆ ಇಲಾಖೆ ಪದಾಧಿಕಾರಿಗಳ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥೆವಾರು ಹೊಸ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಶುಕ್ರವಾರ ನೇಮಕ ಮಾಡಲಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ: ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್‌.ಸಿ. ಹಿರೇಮಠ (ಅಧ್ಯಕ್ಷ), ಹುಬ್ಬಳ್ಳಿ ಕೇಂದ್ರ ಕಚೇರಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಬಸಲಿಂಗಪ್ಪ ಬೀಡಿ (ಉಪಾಧ್ಯಕ್ಷ), ಕಾನೂನು ಅಧಿಕಾರಿ ಬಾಗಲಕೋಟೆಯ ನಾರಾಯಣಪ್ಪ ಕುರುಬರ (ಪ್ರಧಾನ ಕಾರ್ಯದರ್ಶಿ), ಬಾಗಲಕೋಟೆ ವಿಭಾಗೀಯ ಸಂಚಾರ ಅಧಿಕಾರಿ ಪಡಿಯಪ್ಪ ವಿ. ಮೇತ್ರಿ (ಖಜಾಂಚಿ).

ಚಿಕ್ಕೋಡಿ ವಿಭಾಗೀಯ ಸಂಚಾರ ಅಧಿಕಾರಿ ಶಶಿಧರ ವಿ. ಮರಿದೇವರಮಠ, ಪ್ರಾದೇಶಿಕ ಕಾರ್ಯಾಗಾರ ಕಚೇರಿಯ ಉಪಮುಖ್ಯ ಕಾರ್ಯ ವ್ಯವಸ್ಥಾಪಕ ಪ್ರವೀಣ ಇಡೂರ, ಹುಬ್ಬಳ್ಳಿ ವಿಭಾಗೀಯ ತಾಂತ್ರಿಕ ಅಧಿಕಾರಿ ಕಿರಣಕುಮಾರ ಬಸಾಪುರೆ, ಹುಬ್ಬಳ್ಳಿ ಗ್ರಾಮಾಂತರ ಘಟಕ–3ರ ವ್ಯವಸ್ಥಾಪಕ ರವೀಂದ್ರ ನಾಡಗೌಡ, ಅಥಣಿ ಘಟಕದ ವ್ಯವಸ್ಥಾಪಕ ಪಿ.ಆರ್‌. ಕಿರಣಗಿ, ಮುಂಡರಗಿ ಘಟಕದ ವ್ಯವಸ್ಥಾಪಕ ವಿಜಯಕುಮಾರ ಕುಮಠಳ್ಳಿ, ಹಾವೇರಿ ಸಹಾಯಕ ಲೆಕ್ಕಾಧಿಕಾರಿ ಸುನೀಲ ವಾಡೇಕರ ಮತ್ತು ಸಹಾಯಕ ಸಂಚಾರ ವ್ಯವಸ್ಥಾಪಕಿ ರೋಹಿಣಿ ಆರ್‌. ಬೇವಿನಕಟ್ಟಿ ನಿರ್ದೇಶಕರಾಗಿ ನೇಮಕವಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.