ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಕೈ 360’ ಕ್ರಿಕೆಟ್ ಟೂರ್ನಿ 13ರಿಂದ

Last Updated 11 ಡಿಸೆಂಬರ್ 2020, 11:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡದ ಫಸ್ಟ್‌ ಕ್ರಿಕೆಟ್ ಅಕಾಡೆಮಿ ಮೊದಲ ಬಾರಿಗೆ ಆಯೋಜಿಸಿರುವ ‘ಸ್ಕೈ 360’ 14 ವರ್ಷದ ಒಳಗಿವನರ ಅಂತರ ಕ್ಲಬ್ ಕ್ರಿಕೆಟ್‌ ಟೂರ್ನಿ ಡಿ. 13ರಿಂದ 20ರ ವರೆಗೆ ಜಿಮ್ಖಾನಾ ಮೈದಾನದಲ್ಲಿ ನಡೆಯಲಿದ್ದು, ಒಟ್ಟು 12 ತಂಡಗಳು ಪೈಪೋಟಿ ನಡೆಸಲಿವೆ.

ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಸಂದೀಪ ಪೈ ’ಹುಬ್ಬಳ್ಳಿಯ ಏಳು, ಧಾರವಾಡದ ಮೂರು, ಬೆಳಗಾವಿ ಮತ್ತು ಗದಗನ ತಲಾ ಒಂದು ತಂಡಗಳು ಪಾಲ್ಗೊಳ್ಳಲಿವೆ. ರೌಂಡ್‌ ರಾಬಿನ್‌ ಲೀಗ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಪ್ರತಿ ಗುಂಪಿನಲ್ಲಿ ಮೂರು ತಂಡಗಳು ಇರಲಿವೆ. ಪ್ರತಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರನಿಗೆ ಪಂದ್ಯ ಶ್ರೇಷ್ಠ, ಬಳಿಕ ವೈಯಕ್ತಿಕ ಪ್ರಶಸ್ತಿಗಳನ್ನೂ ಕೊಡಲಾಗುವುದು‘ ಎಂದು ತಿಳಿಸಿದರು.

’19 ವರ್ಷದ ಒಳಗಿನವರ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಮನೋಜ ಮಲ್ಹೋತ್ರಾ, 23 ವರ್ಷದ ಒಳಗಿನವರ ರಾಜ್ಯ ತಂಡದಲ್ಲಿ ಆಡಿದ್ದ ರಾಹುಲ್ ವರ್ಣೇಕರ್‌ ಆಡಲಿದ್ದಾರೆ. ಚಾಂಪಿಯನ್‌ ಮತ್ತು ರನ್ನರ್ಸ್‌ ಅಪ್ ತಂಡಕ್ಕೆ ಟ್ರೋಫಿ ನೀಡಲಾಗುವುದು‘ ಎಂದು ಹೇಳಿದರು.

’ಟೂರ್ನಿಯ ಎಲ್ಲ ಪಂದ್ಯಗಳ ಸ್ಕೋರ್‌ಗಳನ್ನು ಆನ್‌ಲೈನ್‌ ಮೂಲಕ ನೀಡಲಾಗುವುದು. ‘ಸ್ಕೈ 360’ ಸೆಲ್ಯೂಷನ್‌ ಯುಟ್ಯೂಬ್‌ ಮೂಲಕವೂ ಪಂದ್ಯಗಳನ್ನು ವೀಕ್ಷಿಸಬಹುದು. ಪಂದ್ಯವನ್ನು ಡ್ರೋಣ್‌ ನೆರವಿನೊಂದಿಗೆ ಸಂಪೂರ್ಣ ಚಿತ್ರೀಕರಣ ಮಾಡಲಾಗುವುದು‘ ಎಂದರು.

‘ಸ್ಕೈ 360’ ಸೆಲ್ಯೂಷನ್‌ ನಿರ್ದೇಶಕ ಮಹೇಶ ಟೂರ್ನಿಗೆ ಚಾಲನೆ ನೀಡಲಿದ್ದು,‌ ಕೆಎಸ್‌ಸಿಎ ಧಾರವಾಡ ವಲಯದ ಮಾಜಿ ನಿಮಂತ್ರಕ ಬಾಬಾ ಭೂಸದ, ಅರುಣಕುಮಾರ ಚಿಮ್ಮಲಗಿ, ಪ್ರಸಾದ ಶೆಟ್ಟಿ ಮತ್ತು ಪ್ರಶಾಂತ ಶೆಟ್ಟಿ ಪಾಲ್ಗೊಳ್ಳುವರು. ಸತೀಶ ಮೇಲಿನಮನಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT