ಭಾನುವಾರ, ಜನವರಿ 24, 2021
28 °C

ಸಚಿವ ಜಗದೀಶ ಶೆಟ್ಟರ್ ಭೇಟಿ ವೇಳೆ ಮಣ್ಣು ಕುಸಿತ: ಕೆಲಕಾಲ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಸೇತುವೆ ನಿರ್ಮಾಣ ವೀಕ್ಷಣೆಗೆ ಸಚಿವ ಜಗದೀಶ ಶೆಟ್ಟರ್ ತೆರಳಿದ್ದ ವೇಳೆ ಮಣ್ಣು ಕುಸಿತದಿಂದ ಕೆಲಕಾಲ ಆತಂಕದ ‌ವಾತಾವರಣ ನಿರ್ಮಾಣವಾಗಿತ್ತು.

ಶೆಟ್ಟರ್ ಅವರು ಸೇತುವೆ ಕೆಳಗಡೆ ಹೋದಾಗ ಜೆಸಿಬಿ ಕೆಲಸ ಮುಂದುವರಿಸಿದ್ದರಿಂದ ಮೇಲಿನ ಮಣ್ಣು ಕುಸಿಯಿತು. ಭಾರೀ ದೂಳು ಎದ್ದಿದ್ದರಿಂದ ಗೊಂದಲ ಉಂಟಾಯಿತು.

ಫೋಟೊ ತೆಗೆಯಲು ನಿಂತಿದ್ದ ಫೋಟೊ ಗ್ರಾಫರ್ ಗಳನ್ನು ಬದಿಗೆ ಸರಿಸಲಾಯಿತು. ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು