ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಕಾನೂನು ವಿವಿ: 2 ವರ್ಷಗಳಿಂದ ನಡೆದಿಲ್ಲ ಘಟಿಕೋತ್ಸವ

ಶೈಕ್ಷಣಿಕ ಮಂಡಳಿ ರಚನೆ ವಿಳಂಬ
Published 22 ಫೆಬ್ರುವರಿ 2024, 3:02 IST
Last Updated 22 ಫೆಬ್ರುವರಿ 2024, 3:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ (ಅಕಾಡೆಮಿಕ್‌ ಕೌನ್ಸಿಲ್‌) ರಚನೆ ವಿಳಂಬ ಆಗಿರುವ ಕಾರಣ ಎರಡು ವರ್ಷಗಳಿಂದ ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆದಿಲ್ಲ.

ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ರಾಜ್ಯದ 108 ಕಾನೂನು ಕಾಲೇಜುಗಳಿವೆ. 2021–22 ಮತ್ತು 2022–23ನೇ ಸಾಲಿನ ಘಟಿಕೋತ್ಸವ ಈವರೆಗೆ ನಡೆದಿಲ್ಲ. ಕಾನೂನು ಪದವಿ ಹಾಗೂ ಸ್ನಾತಕೋತ್ತರ ಪದವಿಯ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಮಾಣ ಪತ್ರದ ನಿರೀಕ್ಷೆಯಲ್ಲಿದ್ದಾರೆ.

ರಚನೆಯಾಗದ ಮಂಡಳಿ:

‘ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಮಂಡಳಿ ರಚನೆಯಾಗಿಲ್ಲ. ಮಂಡಳಿ ರಚಿಸಿ, ಅದರ ಒಪ್ಪಿಗೆ ಪಡೆದ ಬಳಿಕವೇ ಘಟಿಕೋತ್ಸವ ನಡೆಸಲು ಅವಕಾಶವಿದೆ. ಹೀಗಾಗಿ ಮಂಡಳಿಯನ್ನು ತ್ವರಿತವಾಗಿ ರಚಿಸಿ’ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ರಾಜ್ಯಪಾಲರಿಗೆ ಹಲವು ಬಾರಿ ಮನವಿ ಮಾಡಿದೆ.

ಸ್ಪಷ್ಟನೆ ಕೋರಿಕೆ:

‘ಮಂಡಳಿ ಒಟ್ಟು 25 ಸದಸ್ಯರನ್ನು ಒಳಗೊಂಡಿರುತ್ತದೆ. ಇದರಲ್ಲಿ ರಾಜ್ಯ ಸರ್ಕಾರ ಐವರನ್ನು ಐವರನ್ನು ಸದಸ್ಯರನ್ನಾಗಿ ನೇಮಿಸುತ್ತದೆ. ಕಳೆದ ವರ್ಷವೇ ಸರ್ಕಾರ ಸದಸ್ಯರ ಪಟ್ಟಿ ಕಳುಹಿಸಿಕೊಟ್ಟಿತ್ತು. ಈ ಸದಸ್ಯರ ಬಗ್ಗೆ ರಾಜ್ಯಪಾಲರ ಕಚೇರಿ ಹೆಚ್ಚಿನ ವಿವರಣೆ ಬಯಸಿ, ಸರ್ಕಾರ ಮತ್ತು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿತ್ತು. ಇದರಿಂದ ಮಂಡಳಿ ಇನ್ನೂ ರಚನೆಯಾಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವಿಳಂಬ:

‘ವಿಶ್ವವಿದ್ಯಾಲಯದ ಹಳೆಯ ಶೈಕ್ಷಣಿಕ ಮಂಡಳಿ ಅವಧಿ ಒಂದೂವರೆ ವರ್ಷಗಳ ಹಿಂದೆಯೇ ಮುಗಿದಿದ್ದು, ಹೊಸ ಮಂಡಳಿ ರಚನೆ ಆಗಬೇಕಿದೆ. ಕಳೆದ ವರ್ಷ ವಿಧಾನಸಭೆ ಚುನಾವಣೆ ಮತ್ತು ಇನ್ನಿತರ ಕಾರಣಗಳಿಂದ ರಚಿಸಲು ವಿಳಂಬವಾಗಿದೆ. ಕೆಲ ಸ್ಪಷ್ಟನೆಗಳನ್ನು ರಾಜ್ಯಪಾಲರ ಕಚೇರಿ ಕೇಳಿತ್ತು. ಅವುಗಳನ್ನು ಕಳುಹಿಸಲಾಗಿದೆ. ಸದ್ಯದಲ್ಲೇ ಮಂಡಳಿ ರಚನೆ ಆಗಬಹುದು. ಇದಾದ ಕೂಡಲೇ ಘಟಿಕೋತ್ಸವದ ದಿನಾಂಕ ನಿಗದಿಪಡಿಸುತ್ತೇವೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರೊ. ಸಿ. ಬಸವರಾಜ
ಪ್ರೊ. ಸಿ. ಬಸವರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT