‘ಸರ್ಕಾರಕ್ಕೆ ಶೀಘ್ರ ಪ್ರಸ್ತಾವ’
‘ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ಪ್ರಮಾಣ ಹೆಚ್ಚಬೇಕು. ಈ ನಿಟ್ಟಿನಲ್ಲಿ ರೈತರಿಗೆ ಜಾಗೃತಿ ಮೂಡಿಸಬೇಕು. ಬೆಳೆ ಹೆಚ್ಚಿದರೆ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಅನುಕೂಲವಾಗುತ್ತದೆ. ಸ್ಥಳೀಯವಾಗಿ ಮಾತ್ರವಲ್ಲದೆ ಬೇರೆ ಜಿಲ್ಲೆಗಳಿಂದಲೂ ಕಬ್ಬನ್ನು ಇಲ್ಲಿಗೆ ತರುತ್ತಾರೆ. ಕೈಗಾರಿಕಾ ಸ್ಥಾಪನೆಗೆ ಅನುಕೂಲಕರ ವಾತಾವರಣವನ್ನೂ ನಿರ್ಮಿಸಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಜಿ.ಕೆ.ಆದಪ್ಪಗೌಡರ ತಿಳಿಸಿದರು. ‘ಸಾಕಷ್ಟು ಪ್ರಮಾಣದಲ್ಲಿ ನೀರಿನ ವ್ಯವಸ್ಥೆ ಗುಣಮಟ್ಟದ ಬೆಳೆಗೂ ಆದ್ಯತೆ ನೀಡಬೇಕಿದೆ. ಕೈಗಾರಿಕಾ ನಿಯಮಗಳನ್ನು ಸರಳಗೊಳಿಸಬೇಕಿದೆ. ಸಕ್ಕರೆ ಕಾರ್ಖಾನೆ ಸ್ಥಾಪನೆಯಾದಲ್ಲಿ ಇತರೆ ವ್ಯಾಪಾರವೂ ಬೆಳೆಯುತ್ತದೆ’ ಎಂದು ಉದ್ಯಮಿ ವಿನಯ ಜವಳಿ ಹೇಳಿದರು.