ಮಂಗಳವಾರ, ಸೆಪ್ಟೆಂಬರ್ 27, 2022
27 °C

ತಾರಿಹಾಳ ಪ್ರಕರಣ: ಮೃತರ ಸಂಖ್ಯೆ ಆರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಗಾಯಗೊಂಡು ಕಿಮ್ಸ್‌
ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾರಿಹಾಳದ ಚನ್ನವ್ವ ಹರಿವಾಳ (42) ಅವರು ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ.

ಇದರೊಂದಿಗೆ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿದೆ. ಅವಘಡದಲ್ಲಿ ಗಾಯಗೊಂಡಿರುವ ಮತ್ತಿಬ್ಬರಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ.  

ಚಾಕು ಇರಿತ

ಹುಬ್ಬಳ್ಳಿ: ಆಟೊ ನಿಲ್ಲಿಸುವ ವಿಷಯಕ್ಕೆ ಆಟೊ ಚಾಲಕನೊಬ್ಬ ಮತ್ತೊಬ್ಬ ಆಟೊ ಚಾಲಕನ ಜತೆ ಜಗಳ ಮಾಡಿ ಚಾಕುವಿ
ನಿಂದ ಇರಿದ ಘಟನೆ ಹಳೇ ಹುಬ್ಬಳ್ಳಿಯ ಸದಾಶಿವನಗರದ ಎರಡನೇ ಕ್ರಾಸ್‌ನಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಜಾಕೀರ ಅವರು ಶನಿವಾರ ರಾತ್ರಿ ಸದಾಶಿವನಗರದ ತಮ್ಮ ಮನೆ ಬಳಿ ಆಟೊ ನಿಲ್ಲಿಸುತ್ತಿದ್ದ ವೇಳೆ ವೇಗವಾಗಿ ಆಟೊ ಚಾಲನೆ ಮಾಡಿಕೊಂಡು ಬಂದ ಆರೋಪಿ ನದೀಮ ಖವಾಸ ಜಾಕೀರ ಅವರ ಕಾಲಿನ ಮೇಲೆ ಆಟೊ ಹಾಯಿಸಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಜಾಕೀರ್ ಮತ್ತು ಆತನ ಪತ್ನಿಯನ್ನು ಅವಾಚ್ಯವಾಗಿ ನಿಂದಿಸಿದ್ದಾನೆ. ನಂತರ ಜಾಕೀರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಕೀರ್ ಅವರಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಬೈಕ್ ಸವಾರ ಸಾವು

ಇಲ್ಲಿನ ಶೇರೆವಾಡ ಗ್ರಾಮದ ಟೋಲ್‌
ಗೇಟ್ ಬಳಿ ರಸ್ತೆ ಮೇಲೆ ನಿಲ್ಲಿಸಿದ್ದ ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆ
ದಿದ್ದು, ದ್ವಿಚಕ್ರ ವಾಹನ ಸವಾರ ಮೃತಪಟ್ಟ
ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.

ಕುಂದಗೋಳದ ಕಾಳಿದಾಸ ನಗರದ ಹನಮಂತಪ್ಪ ಸೋಮನ್ನವರ ಮೃತರು. ಶಿರಹಟ್ಟಿಯ ಹಾಲಪ್ಪ ಒಲಿ ಎಂಬಾತ ಯಾವುದೇ ಮುನ್ಸೂಚನೆ ನೀಡದೆ ಗೂಡ್ಸ್ ವಾಹನವನ್ನು ರಸ್ತೆ ಮೇಲೆ ನಿಲ್ಲಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು