ಶನಿವಾರ, ಜನವರಿ 23, 2021
28 °C
15ರಿಂದ ರಾಮಮಂದಿರ ದೇಣಿಗೆ ಸಮರ್ಪಣಾ ಅಭಿಯಾನ

90 ಲಕ್ಷ ಮನೆಗಳನ್ನು ತಲುಪುವ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಜ. 15ರಿಂದ ದೇಶದಾದ್ಯಂತ ದೇಣಿಗೆ ಸಂಗ್ರಹ ಅಭಿಯಾನ ಆರಂಭವಾಗಲಿದ್ದು, ಕರ್ನಾಟಕದಲ್ಲಿ 90 ಲಕ್ಷ ರಾಮ ಭಕ್ತರ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದರು.

ಆರ್‌ಎಸ್ಎಸ್‌ ಕಚೇರಿ ’ಕೇಶವಕುಂಜ‘ದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಭಿಯಾನದಲ್ಲಿ ಐದು ಕಾರ್ಯಕರ್ತರನ್ನು ಒಳಗೊಂಡ ತಂಡ ಗ್ರಾಮೀಣ ಪ್ರದೇಶದಿಂದ ಕೆಲಸ ಮಾಡಲಿದೆ. ಆಯಾ ದಿನ ಸಂಗ್ರಹವಾದ ದೇಣಿಗೆಯನ್ನು 48 ತಾಸಿನ ಒಳಗೆ ತೀರ್ಥಕ್ಷೇತ್ರ ಟ್ರಸ್ಟ್‌ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವುದು. ಇದಕ್ಕೆ ಆದಾಯ ತೆರಿಗೆ ಕಾಯ್ದೆಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಸಿಗಲಿದೆ’ ಎಂದರು.

’ದೇಶದಾದ್ಯಂತ 15ರಿಂದ ಫೆ. 27ರ ತನಕ ಅಭಿಯಾನ ನಡೆಯಲಿದೆ. ರಾಜ್ಯದಲ್ಲಿ 20 ದಿನಗಳಲ್ಲಿ 27,500 ಗ್ರಾಮಗಳನ್ನು ಮುಟ್ಟುವ ಗುರಿ ಹೊಂದಿದ್ದೇವೆ. ದೇಶದಲ್ಲಿ ಒಟ್ಟು 22 ಕೋಟಿ ರಾಮಭಕ್ತರ ಮನೆಗಳಿದ್ದು, ಅದರಲ್ಲಿ ಕನಿಷ್ಠ 11 ಕೋಟಿ ಮನೆಗಳನ್ನಾದರೂ ತಲುಪಲಾಗುವುದು. ಈ ಕುರಿತು ಜನಜಾಗೃತಿ ಮೂಡಿಸಲು ಉತ್ತರ ಪ್ರಾಂತದಲ್ಲಿ 50 ಲಕ್ಷ ಕರಪತ್ರಗಳನ್ನು ಹಂಚಲಾಗುವುದು’ ಎಂದರು.

ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಮಹಾಅಭಿಯಾನದ ರಾಜ್ಯ ಸಮಿತಿ ಸದಸ್ಯರಾದ ರಾಮನಗೌಡ್ರು, ಡಿ.ಟಿ. ಮಳಗಿ ಮತ್ತು ಕೃಷ್ಣ ಜೋಶಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.