ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೀಮಿಯರ್‌ ಲೀಗ್ ಕ್ರಿಕೆಟ್‌ ಟೂರ್ನಿ: ಮಾಸ್ಟರ್ ತಂಡಕ್ಕೆ ಜಯ

Published 24 ಜೂನ್ 2024, 15:29 IST
Last Updated 24 ಜೂನ್ 2024, 15:29 IST
ಅಕ್ಷರ ಗಾತ್ರ

ನವಲಗುಂದ: ಪಟ್ಟಣದ ಶಂಕರ ಕಾಲೇಜು ಮೈದಾನದಲ್ಲಿ ಕೋನರಡ್ಡಿ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡ ಕೋನರಡ್ಡಿ ಪ್ರೀಮಿಯರ್ ಲೀಗ್ 10 ಓವರ್‌ಗಳ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನವಲಗುಂದದ ಮಾಸ್ಟರ್ ತಂಡ 108 ರನ್ ಗಳಿಸಿ ಪ್ರಥಮ ಸ್ಥಾನ ಪಡೆದು ₹66,666 ನಗದು ಬಹುಮಾನ ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಅಣ್ಣಿಗೇರಿ ರಾಘವೇಂದ್ರ ತಂಡ 93ರನ್ ಗಳಿಸಿ ಎರಡನೇ ಸ್ಥಾನದೊಂದಿಗೆ ₹33,333 ನಗದು ಬಹುಮಾನ ಹಾಗೂ ಕಪ್ ಪಡೆದುಕೊಂಡಿತು. ನವಲಗುಂದದ ರಿ ಕ್ರಿಯೆಷನ್ ತಂಡ ಮೂರನೇ ಸ್ಥಾನ ಪಡೆದೊಂದಿಗೆ ₹22,222 ಹಾಗೂ ಕಪ್ ಪಡೆದರೆ, ನವಲಗುಂದದ ಯಂಗ್‌ ಸ್ಟಾರ್ ತಂಡ ನಾಲ್ಕನೇ ಸ್ಥಾನದೊಂದಿಗೆ ₹11,111ನಗದು ಹಾಗೂ ಕಪ್ ಪಡೆದಿದೆ.

ಪಂದ್ಯ ಶ್ರೇಷ್ಠ ವಿಠ್ಠಲ್ ಹಿರಗಣ್ಣವರ, ಬೆಸ್ಟ್ ಬ್ಯಾಟ್ಸಮನ್ಅ  ಬ್ದುಲ್ ಗದಗ ಹಾಗೂ ಮಂಜುನಾಥ ಉಮಚಗಿ; ಬೆಸ್ಟ್ ಬೌಲರ್ ಸತೀಶ್ ನಾಯಕ, ಸರಣಿ ಪುರುಷ ವಿನಾಯಕ ದಾಡಿಬಾವಿ ಬಹುಮಾನ ಪಡೆದುಕೊಂಡರು.

ಮುಕ್ತಾಯ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಶಾಸಕ ಎನ್.ಎಚ್. ಕೋನರಡ್ಡಿ ಬಹುಮಾನ ವಿತರಿಸಿ ಮಾತನಾಡಿ, ‘ಯುವಕರು ತಮ್ಮಲ್ಲಿರುವ ಕ್ರೀಡಾಸಾಮರ್ಥ್ಯವನ್ನು ವೇದಿಕೆ ಸಿಕ್ಕಾಗ ಉಪಯೋಗ ಮಾಡಿಕೊಳ್ಳಿ. ಮುಂಬರುವ ದಿನಗಳಲ್ಲಿ ಕಬಡ್ಡಿ, ಕೊಕ್ಕೊ ಸೇರಿದಂತೆ ಅನೇಕ ಕ್ರೀಡೆ ಆಯೋಜನೆ ಮಾಡಲಾಗುವುದು’ ಎಂದರು.

ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿದ್ದವು.

ನವೀನ ಕೋನರಡ್ಡಿ, ರಮೇಶ ನವಲಗುಂದ, ಪ್ರದೀಪ್ ಲೆಂಕಿನಗೌಡ್ರ, ನಾಗರಾಜ ದಳವಾಯಿ, ಅಜ್ಜು ನವಲಗುಂದ, ಮಹಾಂತೇಶ್ ಭೋವಿ , ಬಾಲು ನದಾಫ್, ಚನ್ನಪ್ಪ ಸವದಿ, ಪ್ರಕಾಶ್ ಮಾಳವಾಡ, ಆನಂದ ಗೋಕಾವಿ, ಶಿವು ಚಲವಾದಿ, ಸೇರಿದಂತೆ ಕ್ರೀಡಾಪಟುಗಳು ಅಭಿಮಾನಿಗಳು ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT