ಹುಬ್ಬಳ್ಳಿ: ನವೋದ್ಯಮಿಗಳನ್ನು ಜಾಗತಿಕ ಮಟ್ಟದ ಸವಾಲಿಗೆ ತಕ್ಕಂತೆ ರೂಪಿಸುವ ಉದ್ದೇಶದಿಂದ ಟೈ ಯಂಗ್ ಎಂಟರ್‌ಪ್ರೈನರ್ಸ್ (ಟೈ) ಎಂಟನೇ ಬ್ಯಾಚ್‌ನ ಕಾರ್ಯಾಗಾರವನ್ನು ಜೂನ್ 7ರಂದು ಸಂಜೆ 5 ಗಂಟೆಗೆ ಝೂಮ್ ಆ್ಯಪ್ ಮೂಲಕ ಆಯೋಜಿಸಿದೆ.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಅಶೋಕ ಶೆಟ್ಟರ್ ಅವರು ಕಾರ್ಯಾಗಾರ ಉದ್ಘಾಟಿಸಲಿದ್ದು, ದೇಶಪಾಂಡೆ ಫೌಂಡೇಷನ್ ಸಿಇಒ ವಿವೇಕ ಪವಾರ್ ಪಾಲ್ಗೊಳ್ಳಲಿದ್ದಾರೆ.

ಭವಿಷ್ಯದ ನವೋದ್ಯಮದ ಯೋಜನೆ ರೂಪಿಸಿಕೊಳ್ಳಲು ಧಾರವಾಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ 8ನೇ ತರಗತಿಯಿಂದ ಪಿಯುಸಿ ಓದುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಟೈ ಹುಬ್ಬಳ್ಳಿ ಘಟಕದ ಅಧ್ಯಕ್ಷ ವಿಜೇಶ್ ಸೈಗಲ್ ತಿಳಿಸಿದ್ದಾರೆ.

ಆಸಕ್ತ ವಿದ್ಯಾರ್ಥಿಗಳು ಕಾರ್ಯಾಗಾರದ ಐಡಿ 81035477039 ಹಾಗೂ ಪಾಸ್‌ವರ್ಡ್ tye ಉಪಯೋಗಿಸಿ ಪಾಲ್ಗೊಳ್ಳಬಹುದಾಗಿದೆ. ಉಚಿತವಾಗಿದ್ದು, ನೋಂದಣೆಯೂ ಅಗತ್ಯವಿಲ್ಲ ಎಂದು ಸಂಘಟಕರು ಹೇಳಿದ್ದಾರೆ. ಇನ್ನಷ್ಟು ಮಾಹಿತಿಗೆ ಈ ಮೇಲ್ edtiehubli@gmail.com ಅಥವಾ ಪ್ರಸನ್ನ ಕೆ. ಅವರ ಮೊ. 9886081723 ಮೂಲಕ ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.