ಶುಕ್ರವಾರ, ಮೇ 27, 2022
28 °C
ಸಿದ್ಧಾರೂಢ ಮಠದ ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಫಲಿತಾಂಶ ಪ್ರಕಟ

ರಾಜ್ಯಮಟ್ಟದ ಭಜನಾ ಸ್ಪರ್ಧೆ- ಮೊದಲ ಮೂರು ಸ್ಥಾನ: 15 ತಂಡಗಳಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಇಲ್ಲಿನ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್‌ ಕಮಿಟಿ ಸಿದ್ಧಾರೂಢರ 186ನೇ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಏಳನೇ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನಗಳನ್ನು 15 ತಂಡಗಳಿಗೆ ಹಂಚಲಾಗಿದೆ.

ಮಠದ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನಗಳನ್ನು ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ನರಗುಂದದ ಪತ್ರಿವನ ಮಠದ ಸಿದ್ಧವೀರ ಶಿವಾಚಾರ್ಯ ಅವರು ವಿತರಿಸಿದರು. 26 ಜಿಲ್ಲೆಗಳಿಂದ 140ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು. ಜಿಲ್ಲಾವಾರು ಸಮಾಧಾನಕರ ಹಾಗೂ ವಿಶೇಷ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.

ವೈಯಕ್ತಿಕ ಪ್ರಶಸ್ತಿ: ಜಮಖಂಡಿಯ ಬನಶಂಕರಿ ಭಜನಾ ಸಂಘ (ಮಹಿಳಾ ವಿಭಾಗ), ಗೋಕಾಕ ತಾಲ್ಲೂಕಿನ ಚಿಕ್ಕನಂದಿಯ ಸಿದ್ಧಾರೂಢ ಭಜನ ಮಂಡಳಿ (ಬಾಲಕರ ವಿಭಾಗ), ಕಲಘಟಗಿ ತಾಲ್ಲೂಕಿನ ಉಗ್ನಿಕೇರಿಯ ಬಾಲಯೋಗಿ ಮಾಣಿಕ್ಯ ಶಿವಯೋಗಿ ಚನ್ನವೃಷಭೇಂದ್ರ ಭಜನಾ ಮಂಡಳಿ (ಬಾಲಕಿಯರ ವಿಭಾಗ), ಧಾರವಾಡ ಜಿಲ್ಲೆಯ ತಡಕೋಡದ ಬಸವಾದಿ ಪ್ರಮಥರ ಭಜನಾ ಮಂಡಳಿ, ಗೋಕಾಕ ತಾಲ್ಲೂಕಿನ ಉದಗಟ್ಟಿಯ ಸಿದ್ಧಾರೂಢ ಭಜನ ಮಂಡಳಿ (ಉತ್ತಮ ಗಾಯಕರು), ಗುಳೇದಗುಡ್ಡ ತಾಲ್ಲೂಕಿನ ಹಿರೇಬೂದಿಹಾಳದ ಬಸವೇಶ್ವರ ಮಂಡಳಿ, ಬದಾಮಿ ತಾಲ್ಲೂಕಿನ ಕೆರೂರಿನ ಮಹಾಲಕ್ಷ್ಮಿ ಭಜನಾ ಮಂಡಳಿ (ಉತ್ತಮ ಹಾರ್ಮೋನಿಯಂ), ರಾಯಭಾಗ ತಾಲ್ಲೂಕಿನ ದೇವರಕೊಂಡ ಭಜನಾ ಮಂಡಳಿ, ಜಮಖಂಡಿ ತಾಲ್ಲೂಕಿನ ಅಡಿಹುಡಿಯ ಮಾಳಿಂಗರಾಯ ಗುಗ್ಗರಿ ತಂಡ (ಉತ್ತಮ ತಬಲಾ), ಗುಳೇದಗುಡ್ಡ ತಾಲ್ಲೂಕಿನ ಹುಲಸಗೇರಿಯ ಅಕ್ಕಲಕೋಟ ರೇವಣಸಿದ್ದೇಶ್ವರ ಮಂಡಳಿ, ರಬಕವಿ ತಾಲ್ಲೂಕಿನ ಯಲ್ಲಟ್ಟಿಯ ಶಿವಾನಂದ ಮಂಡಳಿ (ಉತ್ತಮ ಧಮಡಿ), ಮೂಡಲಗಿ ತಾಲ್ಲೂಕಿನ ವಡೇರಹಟ್ಟಿಯ ಪಂಚಲಿಂಗೇಶ್ವರ ಮಂಡಳಿ, ಬೀಳಗಿಯ ಬಸವೇಶ್ವರ ಮಂಡಳಿ (ಉತ್ತಮ ತಾಳ), ಧಾರವಾಡ ತಾಲ್ಲೂಕಿನ ನರೇಂದ್ರ ಮಹಾಂತೇಶ ಮಂಡಳಿ ಹಾಗೂ ಗದಗ ಜಿಲ್ಲೆ ಕಣವಿಯ ಗ್ರಾಮದೇವತಾ ಭಜನಾ ಮಂಡಳಿ (ಉತ್ತಮ ಡಗ್ಗಾ ವಾದಕ) ತಂಡಗಳು ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡವು.

ಭಜನಾ ಸ್ಪರ್ಧೆಯ ಅಧ್ಯಕ್ಷ ಶಾಮಾನಂದ ಬಿ. ಪೂಜೇರ, ಸಿದ್ಧರೂಢ ಮಠದ ಟ್ರಸ್ಟ್ ಅಧ್ಯಕ್ಷ ಡಿ.ಡಿ. ಮಳಗಿ, ಜೆ.ಎಸ್‌. ನಾಯಕ, ಜಗದೀಶ, ಗಣಪತಿ ನಾಯ್ಕ, ಎಸ್‌.ಐ. ಕೊಳಕೂಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

 

ಭಜನಾ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದವರು

ಮೊದಲ ಸ್ಥಾನ

ಸಂಘದ ಹೆಸರು;ಊರು

ಶಿವಾನಂದ ಭಾರತಿ ಭಜನಾ ಮಂಡಳಿ;ಮುಧೋಳ ತಾಲ್ಲೂಕಿನ ಶಿರೋಳ

ಸಿದ್ದೇಶ್ವರ ಭಜನಾ ಸಂಘ;ಅಥಣಿ

ಸಿದ್ಧಾರೂಢ ಭಜನಾ ಮಂಡಳಿ;ಗೋಕಾಕ ತಾಲ್ಲೂಕಿನ ಬಳೋಬಾಳ

ಯಲ್ಲಾಲಿಂಗ ಭಜನಾ ಮಂಡಳಿ;ಮೂಡಲಗಿ ತಾಲ್ಲೂಕಿನ ಕಲ್ಲೊಳ್ಳಿ

ಸಿದ್ಧಾರೂಢ ಭಜನಾ ಮಂಡಳಿ;ಹುಕ್ಕೇರಿ ತಾಲ್ಲೂಕಿನ ಮಕಮಕ್ಕನಾಳ

ದ್ವಿತೀಯ ಸ್ಥಾನ

ಸಿದ್ಧಾರೂಢ ಭಜನಾ ಮಂಡಳಿ;ಮೂಡಲಗಿ ತಾಲ್ಲೂಕಿನ ತಿಗಡಿ

ಸಿದ್ಧಾರೂಢ ಭಜನಾ ಮಂಡಳಿ;ಜಮಖಂಡಿ ತಾಲ್ಲೂಕಿನ ಹುಲ್ಯಾಳ

ಗುರು ಬಸವೇಶ್ವರ ಭಜನಾ ಮಂಡಳಿ;ಮುಧೋಳ ತಾಲ್ಲೂಕಿನ ನಾಗರಾಳ

ಸರ್ಪಭೂಷಣ ಭಜನಾ ಮಂಡಳಿ;ಜಮಖಂಡಿ ತಾಲ್ಲೂಕಿನ ಸನಾಳ

ಬಸವರಾಜ ಲಕ್ಷ್ಮೇಶ್ವರ ಭಜನಾ ತಂಡ;ಮುಧೋಳ ತಾಲ್ಲೂಕಿನ ಮುಗಳಖೋಡ

ತೃತೀಯ ಸ್ಥಾನ

ಬಸವೇಶ್ವರ ಭಜನಾ ಮಂಡಳಿ;ಚಾಮರಾಜನಗರ ಜಿಲ್ಲೆಯ ಕಟ್ನವಾಡಿ

ಮುರುಘೇಂದ್ರ ಶಿವಯೋಗಿ ಭಜನಾ ಮಂಡಳಿ;ಅಥಣಿ

ಮರಿಯಮ್ಮದೇವಿ ಭಜನಾ ಮಂಡಳಿ;ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿ

ಸಿದ್ಧಾರೂಢ ಭಜನಾ ಮಂಡಳಿ;ಹುಕ್ಕೇರಿ ತಾಲ್ಲೂಕಿನ ಶಿರಗಾಂವ

ಮಾರುತೇಶ್ವರ ಭಜನಾ ಮಂಡಳಿ;ಮಸ್ಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.