ಕುಂದಗೋಳ: ತಾಲ್ಲೂಕಿನಲ್ಲಿ ರೈತರಿಗೆ ಸಂಮರ್ಪಕವಾಗಿ ಯೂರಿಯಾ ಗೊಬ್ಬರ ದೊರೆಯುತ್ತಿಲ್ಲ ಹಾಗೂ ಸರ್ಕಾರದ ದರಕ್ಕಿಂತ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಮಂಗಳವಾರ ಪಟ್ಟಣದ ಡಿ.ಪಿ.ಪಿ ಸೊಸೈಟಿ ಎದುರು ರೈತರು ಪ್ರತಿಭಟನೆ ಮಾಡಿದರು.

ರೈತ ಮುಖಂಡ ಹಾಗೂ ಪ.ಪಂ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ ಮಾತನಾಡಿ, ರೈತರಿಗೆ ಸರಿಯಾಗಿ ಗೊಬ್ಬರ ದೊರೆಯುತ್ತಿಲ್ಲ. ತಾಲ್ಲೂಕಿನಲ್ಲಿ ಸೊಸೈಟಿ ಹಾಗೂ ಖಾಸಗಿ ರಸಗೊಬ್ಬರ ಮಾರಾಟ ಅಂಗಡಿಯವರು ಪ್ರತ್ಯೇಕವಾಗಿ ಶೇಖರಣೆ ಮಾಡಿಟ್ಟುಕೊಂಡು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.

ಕೆಲ ಸೊಸೈಟಿ ಹಾಗೂ ಅಂಗಡಿಗಳಲ್ಲಿ ಗೊಬ್ಬರದ ದರಪಟ್ಟಿ ಹಾಕಿಲ್ಲ. ದರಪಟ್ಟಿ ಹಾಕಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ಇದ್ದರೂ ನಿರ್ಲಕ್ಷಿಸಲಾಗಿದೆ. ಹೀಗೆ ಮುಂದುವರೆದರೆ ಸಂಬಂಧಿಸಿದ ಕೃಷಿ ಇಲಾಖೆ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಆಗಮಿಸಿದ ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಅವರೊಂದಿಗೆ ಕೆಲ ರೈತರು ವಾಗ್ವಾದ ನಡೆಸಿದರು.

ಸರ್ಕಾರ ಸೂಚಿಸಿದ ದರಲ್ಲಿಯೇ ಗೊಬ್ಬರ ಮಾರಾಟ ಮಾಡಬೇಕು ಎಂದು ಕೃಷಿ ನಿರ್ದೇಶಕರು, ಸೊಸೈಟಿ, ಅಂಗಡಿಯವರಿಗೆ ಸೂಚಿಸಿದರು.

ಶೇಖಣ್ಣ ಬಾಳಿಕಾಯಿ. ಮಲ್ಲಿಕಾರ್ಜುನ ಕಿರೇಸೂರ, ಮಾಹದೇವಪ್ಪ ಬಮ್ಮಸಮುದ್ರ, ಸಿದ್ದು ನಾಗರಹಳ್ಳಿ, ಸುಭಾಷ್ ಬಂಡಿವಾಡ, ಪರಮೇಶ್ವರ ಕಿರೇಸೂರ, ಪಕ್ಕೀರಯ್ಯ ನಾವಳ್ಳಿಮಠ, ಲಕ್ಷಣ ತಳವಾರ, ಟಾಕಪ್ಪ ಬಂಡಿವಾಡ, ನಿಂಗಪ್ಪ ಉಮಚಗಿ, ಶೇಕಪ್ಪ ವಟವಟಿ ಸೇರಿದಂತೆ ಅನೇಕ ರೈತರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.