ಶನಿವಾರ, ಡಿಸೆಂಬರ್ 3, 2022
20 °C

ಲಸಿಕಾ ಅಭಿಯಾನಕ್ಕೆ ಶಾಸಕ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಘಟಗಿ: ತಾಲ್ಲೂಕಿನ ರೈತರ ಜಾನುವಾರಗಳಿಗೆ ಮೂರನೇ ಸುತ್ತಿನ ಕಾಲು–ಬಾಯಿ ಬೇನೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಶಾಸಕ ಸಿ.ಎಂ.ನಿಂಬಣ್ಣವರ ಸೋಮವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ಜಾನುವಾರಗಳನ್ನು ರೋಗದಿಂದ ರಕ್ಷಿಸಲು ಸರ್ಕಾರ ಪಶು ಸಂಗೋಪನ ಇಲಾಖೆ ಮೂಲಕ ಲಸಿಕೆ ನೀಡುತ್ತಿದ್ದು, ಎಲ್ಲ ರೈತರು ತಪ್ಪದೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು’ ಎಂದು ಕೋರಿದರು.

ಹಸುಗಳಿಗೆ ಗೋ ಪೂಜೆ, ಇಲಾಖೆಯ ಜಾನುವಾರಗಳ ಲಸಿಕಾ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.

ತಾಲ್ಲೂಕು ಪಶು ಆಸ್ಪತ್ರೆ ವೈದ್ಯಾಧಿಕಾರಿ ದೇವೇಂದ್ರ ಲಮಾಣಿ ಮಾತನಾಡಿ, ‘ತಾಲ್ಲೂಕಿನಲ್ಲಿ ಮೂರನೇ ಸುತ್ತಿನ ಕಾಲುಬಾಯಿ ಲಸಿಕೆ ಅಭಿಯಾನ ಸೋಮವಾರದಿಂದ ಡಿಸೆಂಬರ್‌ 7ರ ವರೆಗೆ ನಡೆಯಲಿದೆ. ರೈತರ 4 ತಿಂಗಳ ಮೇಲ್ಪಟ್ಟ ಕರು ಹಾಗೂ ಹಸುಗಳಿಗೆ ಲಸಿಕೆ ನೀಡಲಾಗುವುದು’ ಎಂದರು.

ಪಟ್ಟಣ ಪಂಚಾಯ್ತಿ ಸದಸ್ಯ ಗಂಗಾಧರ ಗೌಳಿ, ಎಂ.ಎನ್.ಘಂಟೆ, ಧರೇಶ ಗಾಣಿಗೇರ, ಎಂ.ವೈ. ಮಡಿವಾಳರ, ಶರಣಬಸಪ್ಪ ಬದಾಮಿ ಇದ್ದರು.

ಮಾಹಿತಿಗೆ ಸಹಾಯವಾಣಿ-8277100200 ಸಂಪರ್ಕಿಸಲು ಕೋರಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು