ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾ–ಭಕ್ತಿಯ ವೈಕುಂಠ ಏಕಾದಶಿ

ದೇವಾಲಯಗಳಲ್ಲಿ ವಿಶೇಷ ಪೂಜೆ; ಭಕ್ತರಿಂದ ದೇವರ ದರ್ಶನ
Last Updated 25 ಡಿಸೆಂಬರ್ 2020, 14:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಿಂದೂಗಳು ಉತ್ತರಾಯಣ ಪುಣ್ಯಕಾಲದ ಆರಂಭವೆಂದೂ ನಂಬಿರುವ ದಿನವಾದ ‘ವೈಕುಂಠ ಏಕಾದಶಿ’ಯನ್ನು ಶುಕ್ರವಾರ, ನಗರದ ವೆಂಕಟೇಶ್ವರ ದೇವಾಲಯಗಳಲ್ಲಿ ಆಚರಿಸಲಾಯಿತು. ದೇವರಿಗೆ ವಿಶೇಷ ಪೂಜೆಗಳು ನೆರವೇರಿದವು.

ಮಯೂರಿ ಎಸ್ಟೇಟ್‌ನಲ್ಲಿರುವ ಜೋಡು ವೆಂಕಟೇಶ್ವರ ದೇವಸ್ಥಾನ ಮತ್ತು ಶಕ್ತಿ ಕಾಲೊನಿಯಲ್ಲಿರುವ ಕಾಶಿಮಠ ವೆಂಕಟರಮಣ ಮಂದಿರದಲ್ಲಿ ವೆಂಕಟೇಶ್ವರ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದಲೇ ಪೂಜೆಗಳು ಹಾಗೂ ಧಾರ್ಮಿಕ ವಿಧಿ ವಿಧಾನಗಳು ನಡೆದವು.ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.

ಧನುರ್ಮಾಸದಲ್ಲಿ ಭಗವಂತ ನಿದ್ರಾ ಸಮಯದಿಂದ ಎಚ್ಚರಗೊಂಡು, ಏಕಾದಶಿ ದಿನ ದಕ್ಷಿಣಾಯದಿಂದ ಉತ್ತರಾಯಣ ಪುಣ್ಯಕ್ಷೇತ್ರಕ್ಕೆ ಬರುತ್ತಾನೆ. ಅಂದು ದೇವರಿಗೆ ನೈವೇದ್ಯ ನೀಡಿ ‘ನಾರಾಯಣ’, ‘ಗೋವಿಂದ’ ನಾಮಸ್ಮರಣೆ ಮಾಡಿ, ವೈಕುಂಠ ದ್ವಾರವನ್ನು ಹಾದು ಹೋದರೆ ಪಾಪ ಪರಿಹಾರವಾಗುತ್ತದೆ ಎಂಬ ಪ್ರತೀತಿ ವೈಕುಂಠ ಆಚರಣೆಯೊಂದಿಗೆ ಬೆಸೆದುಕೊಂಡಿದೆ.

ಕೊರೊನಾ ಸೋಂಕು ಹರಡದಂತೆ ದೇವಸ್ಥಾನಗಳಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕೆಲವರನ್ನು ಹೊರತುಪಡಿಸಿದರೆಬಹುತೇಕ ಭಕ್ತರು ಮಾಸ್ಕ್ ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT