ಅಣ್ಣಿಗೇರಿ: ಎಲ್ಲ ಧರ್ಮದವರನ್ನು ಒಗ್ಗೂಡಿಸಿಕೊಂಡು ಪಟ್ಟಣದಲ್ಲಿಈದ್ಗಾ ಕಟ್ಟಡವನ್ನು ನಿರ್ಮಿಸಿರುವುದು ಸಂತಸದ ಸಂಗತಿ ಎಂದು ವಿಧಾನ ಪರಿಷತ್ತಿನ ಸದಸ್ಯ ಸಲೀಂ ಅಹಮದ್ ಹೇಳಿದರು.

ಅಂಜುಮನ್ ಎ ಫಲಾಹೆ ದಾರೈನ್ ಸಂಸ್ಥೆ ವತಿಯಿಂದ ವತಿಯಿಂದ ಬುಧವಾರ ನಡೆದ ನೂತನ ಈದ್ಗಾ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಬಾಕಿ ಇರುವ ಈ ಸಂಸ್ಥೆಯ ಕಟ್ಟಡದ ನಿರ್ಮಾಣಕ್ಕೆ ಶಾಸಕರ ಅನುದಾನದಡಿ ₹ 10 ಲಕ್ಷ ಅನುದಾನ ಒದಗಿಸಲಾಗುವುದು. ರಾಜ್ಯ ಸರ್ಕಾರವು ಎಲ್ಲ ಸಮುದಾಯಗಳ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದೆ ಎಂದು ಹೇಳಿದರು.

ಹಜರತ್ ಖ್ವಾಜಾ ಬಂದಾನವಾಜ್ ದರ್ಗಾದ ಹಜರತ್ ಹಾಫೀಜ್ ಸಯ್ಯದ್ ಮಹ್ಮದಲಿ ಅಲ್ ಹುಸೇನಿಸಾಹೇಬ್ ಮಾತನಾಡಿ, ಅಣ್ಣಿಗೇರಿ ಪಟ್ಟಣದಲ್ಲಿ ಜಾತಿ ಮತ ಭೇದವಿಲ್ಲದ ಎಲ್ಲರನ್ನೂ ಸೇರಿಸಿಕೊಂಡು ಕಟ್ಟಡ ನಿರ್ಮಿಸಿರುವುದು ಮಾದರಿ ಕಾರ್ಯ ಎಂದರು.

ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ಸ್ಥಳೀಯ ಅಂಜುಮನ್ ಸಂಸ್ಥೆಗೆ ಈಗಾಗಲೇ ಸರ್ಕಾರದಿಂದ ಅನುದಾನವನ್ನು ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಅನುದಾನವನ್ನು ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಕಮಲಾಪುರ ದರ್ಗಾದ ಸಯ್ಯದ್ ಸಜ್ಜಾದ ಖಾದ್ರಿ ಪೀರಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಐ.ಜಿ.ಸನದಿ, ವಿನೋದ್ ಅಸೂಟಿ, ಷಣ್ಮುಖ ಗುರಿಕಾರ, ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಅಂಜುಮನ್ ಸಂಸ್ಥೆ ಅಧ್ಯಕ್ಷ ಫಕ್ರುವಲಿ ಲೋಕಾಪುರಿ, ಎ.ಐ.ನಡಕಟ್ಟಿನ, ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ, ಐ.ಜಿ.ಸಮುದ್ರಿ, ಎ.ಎಂ.ಖಾಜಿ, ಮಂಜುನಾಥ ಮಾಯಣ್ಣವರ, ನಾಗಪ್ಪ ದಳವಾಯಿ, ಅಶ್ರಫ್ ಖಾಜಿ, ಅರ್ಜುನ ಕಲಾಲ, ಬಾಬಾಜಾನ್ ಮುಲ್ಲಾನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.