ಗುರುವಾರ , ಜೂನ್ 17, 2021
22 °C
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಂತರ ವಿಭಾಗೀಯ ಕ್ರೀಡಾಕೂಟ

ವಾಲಿಬಾಲ್‌: ಶಿರಸಿ ತಂಡ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಉತ್ತಮ ಪ್ರದರ್ಶನ ನೀಡಿದ ಶಿರಸಿ ತಂಡ ನಗರದ ಪ್ರಾದೇಶಿಕ ತರಬೇತಿ ಕೇಂದ್ರದ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಂತರ ವಿಭಾಗೀಯ ಕ್ರೀಡಾಕೂಟದ ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.

ಫೈನಲ್‌ನಲ್ಲಿ ಶಿರಸಿ ತಂಡ 25–19. 25–20 ಪಾಯಿಂಟ್ಸ್‌ನಿಂದ ಹುಬ್ಬಳ್ಳಿ ಗ್ರಾಮೀಣ ವಿಭಾಗದ ತಂಡವನ್ನು ಮಣಿಸಿತು.

ವಿಜೇತ ತಂಡದಲ್ಲಿ ಅಣ್ಣಪ್ಪ ಮಡಿವಾಳ, ಕೆ.ಎ. ಶೇಖ್‌, ವಿಶ್ವನಾಥ ಪಟಗಾರ, ನಾಗೇಂದ್ರ ಮಡಿವಾಳ, ಗಣಪತಿ ಮಡಿವಾಳ, ದತ್ತಾತ್ರೇಯ ನಾಯ್ಕ, ಅಕ್ರಮ್ ಮುಲ್ಲಾ, ಪರಮೇಶ್ವರ ನಾಯ್ಕ, ಜೆ.ಎನ್‌. ಮಡಿವಾಳ ಇದ್ದರು. ರನ್ನರ್ಸ್‌ ಅಪ್ ತಂಡದಲ್ಲಿ ಎಸ್‌.ಬಿ. ತಳವಾರ, ಜೆ.ಬಿ. ಹೊಸಮನಿ, ಎನ್‌.ಬಿ. ಮಾಡಿಕ್‌, ನಾಗಪ್ಪ ಎಸ್. ಹುಡೇದ, ಪಿ.ಎಂ. ಉಪಾಧ್ಯಾಯ, ಬಿ.ಜಿ. ಬಿಸಿರೊಟ್ಟಿ, ಯು.ಸಿ. ನಾನಾಪೂರ ಮತ್ತು ಮೆಹಬೂಬ ಇದ್ದರು. 

ಲೀಗ್‌ ಪಂದ್ಯಗಳಲ್ಲಿ ಶಿರಸಿ 21–10, 21–6ರಲ್ಲಿ ಗದಗ ಮೇಲೂ, ಹುಬ್ಬಳ್ಳಿ ನಗರ ತಂಡ 21–17, 21–18ರಲ್ಲಿ ಬೆಳಗಾವಿ ತಂಡದ ವಿರುದ್ಧವೂ, ಹುಬ್ಬಳ್ಳಿ ನಗರ ತಂಡ 21–9, 21–7ರಲ್ಲಿ ಬಾಗಲಕೋಟೆ ಮೇಲೂ, ಹಾವೇರಿ 21–13, 21–12ರಲ್ಲಿ ಧಾರವಾಡ ತಂಡದ ವಿರುದ್ಧವೂ, ಹಾವೇರಿ 21–7, 21–6ರಲ್ಲಿ ಆರ್‌ಡಬ್ಲ್ಯುಎಚ್‌ ತಂಡದ ಮೇಲೂ, ಶಿರಸಿ 21–17, 21–15, 15–13ರಲ್ಲಿ ಹುಬ್ಬಳ್ಳಿ–ಧಾರವಾಡ ನಗರ ತಂಡದ ವಿರುದ್ಧವೂ, ಹುಬ್ಬಳ್ಳಿ–ಧಾರವಾಡ ನಗರ ತಂಡ 21–10, 24–22ರಲ್ಲಿ ಹಾವೇರಿ ಮೇಲೂ ಗೆಲುವು ಸಾಧಿಸಿದ್ದವು.

ಉದ್ಘಾಟನೆ: ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಟೂರ್ನಿಗೆ ಚಾಲನೆ ನೀಡಿದರು. ಹುಬ್ಬಳ್ಳಿ ಕೇಂದ್ರ ಕಚೇರಿಯ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ರಾಜೇಶ ಹುದ್ದಾರ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಸಂಚಾರ ವ್ಯವಸ್ಥಾಪಕ ವಿ. ಎಚ್. ಸಂತೋಷ ಕುಮಾರ, ಜಂಟಿ ಮುಖ್ಯಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ ಪಿ.ವೈ. ನಾಯಕ, ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಚಾರ್ಯ ಶ್ರೀನಿವಾಸ ಮೂರ್ತಿ, ಕಾರ್ಯ ವ್ಯವಸ್ಥಾಪಕ  ಪ್ರವೀಣ ಇಡುರ, ಉಪ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ದಶರಥ ಕೆಳಗೇರಿ, ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಎಚ್. ರಾಮನಗೌಡರ, ಪ್ರಾದೇಶಿಕ ಕಾರ್ಯಾಗಾರದ ಉಪ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಜಗದೀಶ ವಿ. ಎಚ್, ಹುಬ್ಬಳ್ಳಿ ಗ್ರಾಮೀಣ ವಿಭಾಗದ ಅಶೋಕ ಆರ್. ಪಾಟೀಲ, ಕ್ರೀಡಾ ಸಮಿತಿ ಸದಸ್ಯರಾದ ಸುನೀಲ ಪತ್ರಿ ಹಾಗೂ ಪಿ. ಮಂಜುನಾಥ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು