ಧಾರವಾಡ: ‘ಜಿಲ್ಲೆಯಲ್ಲಿ 8,05,768 ಪುರುಷರು, 8,10,552 ಮಹಿಳೆಯರು ಹಾಗೂ 95 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 16,16,415 ಮತದಾರರು ಇದ್ದಾರೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ (ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025) ಬಿಡುಗಡೆಗೊಳಿಸಿ ಮಾತನಾಡಿದರು.

‘ಹೊಸದಾಗಿ ಒಟ್ಟು 9,363 ಮಂದಿ (ಸೇರ್ಪಡೆ ಮತ್ತು ಸ್ಥಳಾಂತರ) ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅರ್ಜಿ ನಮೂನೆ-8 (ಮತದಾರರ ಹೆಸರು ಸ್ಥಳಾಂತರ ಹಾಗೂ ತಿದ್ದುಪಡಿ) ಸಲ್ಲಿಸಿ 1,175 ಜನರು (537 ಪುರುಷ, 638 ಮಹಿಳಾ) ಬೇರೆಡೆಗೆ ವರ್ಗಾಯಿಸಿಕೊಂಡಿದ್ದಾರೆ’ ಎಂದು ವಿವರಿಸಿದರು.

‘ಕಳೆದ ಅಕ್ಟೋಬರ್ನಲ್ಲಿ ಪ್ರಕಟಿಸಿದ್ದ ಕರಡು ಪಟ್ಟಿಯಲ್ಲಿ 16,12,536 ಮತದಾರರು (8,04,508 ಪುರುಷರು, 8,07,935 ಮಹಿಳೆಯರು ಹಾಗೂ 93 ಲಿಂಗತ್ವ ಅಲ್ಪಸಂಖ್ಯಾತರು) ಇದ್ದರು. 20,805 ಅಂಗವಿಕಲ ಮತದಾರರು (12,008 ಪುರುಷರು, 8,797 ಮಹಿಳೆಯರು, ಇಬ್ಬರು ಲಿಂಗತ್ವ ಅಲ್ಪಸಂಖ್ಯಾತ) ಇದ್ದಾರೆ’ ಎಂದು ಮಾಹಿತಿ ನೀಡಿದರು.

‘2,867 ಯುವ ಮತದಾರರು ನೋಂದಣಿ ಆಗಿದ್ದು, 16,336 ಮಂದಿಗೆ ಮತದಾರರ ಗುರುತಿನ ಚೀಟಿಯನ್ನು ಅಂಚೆ ಮೂಲಕ ರವಾನಿಸುವ ಪ್ರಕ್ರಿಯೆ ಜಾರಿಯಲ್ಲಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಕಾಂಗ್ರೆಸ್ ಮುಖಂಡ ಪ್ರಕಾಶ್ ಹಳಿಯಾಳ, ಶಿವಾನಂದ ನಿಗದಿ, ಬಿಜೆಪಿ ಮುಖಂಡ ಕಲ್ಯಾಣಶೆಟ್ಟರ್, ಜೆಡಿಎಸ್ ಮುಖಂಡ ದೇವರಾಜ್ ಕಂಬಳಿ ಪಾಲ್ಗೊಂಡಿದ್ದರು.

1665 ಮತಗಟ್ಟೆ

‘ನವಲಗುಂದ 234 ಕುಂದಗೋಳ 214 ಧಾರವಾಡ 234 ಹು-ಧಾ (ಪೂರ್ವ) 218 ಹು-ಧಾ (ಕೇಂದ್ರ) 266 ಹು-ಧಾ (ಪಶ್ಚಿಮ) 271 ಮತ್ತು ಕಲಘಟಗಿ 228 ಸೇರಿದಂತೆ ಒಟ್ಟು 1665 ಮತಗಟ್ಟೆಗಳಿವೆ. ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿ ಮತದಾರರ ನೋಂದಣಾಧಿಕಾರಿ ಕಚೇರಿ ಸಹಾಯಕ ನೋಂದಣಾಧಿಕಾರಿ ಕಚೇರಿ ಆಯಾ ಮತಗಟ್ಟೆ ಹಾಗೂ https://dharwad.nic.in/en/elections/ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.